Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರಾಹುಲ್ ದ್ರಾವಿಡ್ ಇಫೆಕ್ಟ್ ಪಾಕಿಸ್ತಾನಕ್ಕೂ ತಟ್ಟಿತು!

ರಾಹುಲ್ ದ್ರಾವಿಡ್ ಇಫೆಕ್ಟ್ ಪಾಕಿಸ್ತಾನಕ್ಕೂ ತಟ್ಟಿತು!
ಇಸ್ಲಾಮಾಬಾದ್ , ಗುರುವಾರ, 14 ಫೆಬ್ರವರಿ 2019 (09:02 IST)
ಇಸ್ಲಾಮಾಬಾದ್: ಭಾರತದ ವಾಲ್ ಎಂದೇ ಖ್ಯಾತಿವೆತ್ತ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭಾರತ ಎ ತಂಡದ ಕೋಚ್ ಆದ ಮೇಲೆ ಟೀಂ ಇಂಡಿಯಾ ಕ್ರಿಕೆಟಿಗರು ಸುಧಾರಿತ ಪ್ರದರ್ಶನ ನೀಡುತ್ತಿರುವುದು ಇದೀಗ ನೆರೆಯ ಪಾಕಿಸ್ತಾನಕ್ಕೂ ಆದರ್ಶವಾಗಿದೆ.


ದ್ರಾವಿಡ್ ಎ ತಂಡದಲ್ಲಿ ಅತ್ಯುತ್ತಮ ಕ್ರಿಕೆಟಿಗರನ್ನು ತಯಾರುಗೊಳಿಸುತ್ತಿರುವುದು, ಅವರು ಟೀಂ ಇಂಡಿಯಾಕ್ಕೆ ಆಯ್ಕೆಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವುದು ಪಾಕ್ ಕ್ರಿಕೆಟ್ ಮಂಡಳಿಯ ಗಮನ ಸೆಳೆದಿದೆ.

ಹೇಗಾದರೂ ಮಾಡಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಕ್ರಿಕೆಟ್ ನ್ನು ಹಿಂದಿನ ಖ್ಯಾತಿಗೆ ತರಲು ಪ್ರಯತ್ನಿಸುತ್ತಿರುವ ಪಿಸಿಬಿ ಇದೀಗ ಬಿಸಿಸಿಐ ಮಾದರಿಯಲ್ಲೇ ಮಾಜಿ ಕ್ರಿಕೆಟಿಗರನ್ನು ತಮ್ಮಅಂಡರ್ 19 ತಂಡಕ್ಕೆ ಕೋಚ್ ಆಗಿ ಆಯ್ಕೆ ಮಾಡಲು ಪ್ರಯತ್ನ ನಡೆಸಿದೆ.

ಮೂಲಗಳ ಪ್ರಕಾರ ಪಾಕಿಸ್ತಾನದ ಮಾಜಿ ಆಟಗಾರ, ಯೂನಿಸ್ ಖಾನ್ ರನ್ನು ಅಂಡರ್ 19 ತಂಡದ ಕೋಚ್ ಆಗಿ ನೇಮಿಸಲು ಪಿಸಿಬಿ ಪ್ರಯತ್ನ ನಡೆಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಗಾಧ ಅನುಭವವಿರುವ ಯೂನಿಸ್ ರನ್ನು ಯುವ ಕ್ರಿಕೆಟಿಗರಿಗೆ ತರಬೇತು ಮಾಡಲು ನಿಯುಕ್ತಿ ಮಾಡಿದರೆ ಪಾಕ್ ಕ್ರಿಕೆಟಿಗರ ಗುಣಮಟ್ಟ ಹೆಚ್ಚಬಹುದು ಎಂಬುದು ಪಿಸಿಬಿ ಲೆಕ್ಕಾಚಾರ. ಇದಕ್ಕೆ ನೇರವಾಗಿ ರಾಹುಲ್ ದ್ರಾವಿಡ್ ಉದಾಹರಣೆಯನ್ನು ಪಿಸಿಬಿ ನೀಡಿದೆ. ಆದರೆ ಯೂನಿಸ್ ಖಾನ್ ಒಪ್ಪುತ್ತಾರಾ ಎಂಬುದು ಸದ್ಯದ ಪ್ರಶ್ನೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೋಲಿಸಿ ಕಪ್ ನಮ್ದೇ ಮಾಡಿಕೊಳ್ತೀವಿ ಎಂದ ಪಾಕ್ ಕ್ರಿಕೆಟಿಗ