Publish Date: Mon, 07 Dec 2020 (09:09 IST)
Updated Date: Mon, 07 Dec 2020 (09:10 IST)
ಸಿಡ್ನಿ: ಆಸ್ಟ್ರೇಲಿಯಾ ಎ ತಂಡದ ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಪೃಥ್ವಿ ಶಾ ಶೂನ್ಯಕ್ಕೆ ನಿರ್ಗಮಿಸಿದ್ದು, ಟ್ರೋಲ್ ಗೊಳಗಾಗಿದ್ದಾರೆ.
ಐಪಿಎಲ್ ನಲ್ಲೂ ಅವರು ಶೂನ್ಯಕ್ಕೆ ನಿರ್ಗಮಿಸಿ ಟ್ರೋಲ್ ಗೊಳಗಾಗಿದ್ದರು. ಈಗಲೂ ಅದೇ ಕಳಪೆ ಫಾರ್ಮ್ ಮುಂದುವರಿಸಿರುವ ಯುವ ಬ್ಯಾಟ್ಸ್ ಮನ್ ನ್ನು ಟ್ವಿಟರಿಗರು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ. ಅಂತೂ ಶೂನ್ಯ ಸುತ್ತುವುದರಲ್ಲಾದರೂ ಪೃಥ್ವಿ ಸ್ಥಿರತೆ ಕಾಯ್ದುಕೊಂಡಿದ್ದಾರಲ್ಲ ಎಂದು ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.