ಮುಂಬೈ: ಮುಂಬರುವ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದ ಅಂಬಟಿ ರಾಯುಡು ಇತ್ತೀಚೆಗೆ ಟ್ವೀಟ್ ಮೂಲಕ ಪರೋಕ್ಷವಾಗಿ ಬೇಸರ ಹೊರಹಾಕಿದ್ದರು. ಇದೀಗ ರಾಯುಡು ಬೆಂಬಲಕ್ಕೆ ಕ್ರಿಕೆಟಿಗ ಪ್ರಗ್ಯಾನ್ ಓಝಾ ಬಂದಿದ್ದಾರೆ.
ಅಂಬಟಿ ರಾಯುಡು ‘ನಾನು ವಿಶ್ವಕಪ್ ನೋಡಲು 3 ಡಿ ಕನ್ನಡಕ ಖರೀದಿಸಿರುವೆ’ ಎಂದು ಪರೋಕ್ಷವಾಗಿ ತನ್ನನ್ನು ಆಯ್ಕೆ ಮಾಡದೇ ಇದ್ದಿದ್ದಕ್ಕೆ ಟಾಂಗ್ ಕೊಟ್ಟಿದ್ದರು.
ಇದೀಗ ಈ ಕಾಮೆಂಟ್ ಗೆ ಪ್ರತಿಕ್ರಿಯೆ ನೀಡಿರುವ ಸ್ಪಿನ್ನರ್ ಪ್ರಗ್ಯಾನ್ ಓಝಾ ‘ಇದು ಹೈದಾರಾಬಾದ್ ಮೂಲದ ಆಟಗಾರರ ಪರಿಸ್ಥಿತಿ. ನಿನ್ನದೇ ಪರಿಸ್ಥಿತಿಯಲ್ಲೂ ನಾನಿದ್ದೆ. ನಿನ್ನ ಪರಿಸ್ಥಿತಿ ಅರ್ಥವಾಗುತ್ತೆ’ ಎಂದಿದ್ದಾರೆ. ಈ ಮೂಲಕ ತಾವೂ ಟೀಂ ಇಂಡಿಯಾದಲ್ಲಿ ಮೂಲೆಗುಂಪಾದೆ ಎಂದು ಪರೋಕ್ಷವಾಗಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ