ಮುಂಬೈ: 2019 ಏಕದಿನ ವಿಶ್ವಕಪ್ ಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಈ ತಂಡದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಲೇ ಇವೆ.
ಇದರ ಮಧ್ಯೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಟೀಂ ಇಂಡಿಯಾದಲ್ಲಿ ಮಿಸ್ ಆಗಿರುವ ಅಂಶ ಏನು ಎಂದು ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
‘ಭಾರತ ತಂಡದಲ್ಲಿ ಏನೋ ಮಿಸ್ಸಿಂಗ್ ಇದೆ. ಅದು ನಾಲ್ಕನೇ ವೇಗಿ. ಇದು ಸುದೀರ್ಘ ಟೂರ್ನಮೆಂಟ್. ಹೀಗಿರುವಾಗ ಕೇವಲ ಮೂವರು ವೇಗಿಗಳು ಸಾಕಾಗದು. ಅದರಲ್ಲೂ ಹಾರ್ದಿಕ್ ಆಲ್ ರೌಂಡರ್. ನನ್ನ ಪ್ರಕಾರ ಇಂಗ್ಲೆಂಡ್ ಹವಾಗುಣಕ್ಕೆ ನಾಲ್ವರು ವೇಗಿಗಳು ಬೇಕಿದ್ದರು’ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ