Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಖ್ತರ್ ಭವಿಷ್ಯ ನುಡಿದಂತೆ ಪ್ರಧಾನಿ ಮೋದಿ ಧೋನಿಗೆ ಪತ್ರ ಬರೆದೇ ಬಿಟ್ರು! ಆದ್ರೆ ಹೇಳಿದ್ದೇನು?

ಅಖ್ತರ್ ಭವಿಷ್ಯ ನುಡಿದಂತೆ ಪ್ರಧಾನಿ ಮೋದಿ ಧೋನಿಗೆ ಪತ್ರ ಬರೆದೇ ಬಿಟ್ರು! ಆದ್ರೆ ಹೇಳಿದ್ದೇನು?
ನವದೆಹಲಿ , ಶುಕ್ರವಾರ, 21 ಆಗಸ್ಟ್ 2020 (09:05 IST)
ನವದೆಹಲಿ: ಧೋನಿ 2021 ರ ಟಿ20 ವಿಶ್ವಕಪ್ ಆಡುವಂತೆ ಪ್ರಧಾನಿ ಮೋದಿ ಮನವಿ ಮಾಡಬಹುದು ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಹೇಳಿದ್ದರು. ಅಖ್ತರ್ ಭವಿಷ್ಯ ನುಡಿದಂತೆ ಪ್ರಧಾನಿ ಮೋದಿ ಧೋನಿಗೆ ಪತ್ರ ಬರೆದಿದ್ದಾರೆ. ಆದರೆ ಆ ಪತ್ರದಲ್ಲಿ ಹೇಳಿದ್ದೇನು ಗೊತ್ತಾ? ಪತ್ರದ ಸಾರಾಂಶ ಇಲ್ಲಿದೆ.


ಪ್ರೀತಿಯ ಮಹೇಂದ್ರ,
ಆಗಸ್ಟ್ 15 ರಂದು ನಿನ್ನ ಎಂದಿನ ಶೈಲಿಯಲ್ಲಿ ಸಣ್ಣ ವಿಡಿಯೋ ಮಾಡಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವೆ. ಈ ವಿಚಾರ ಇಡೀ ದೇಶದಲ್ಲೇ ಚರ್ಚೆಗೆ ಕಾರಣವಾಯಿತು. ದೇಶದ 130 ಕೋಟಿ ಜನ ನಿಮ್ಮ ನಿರ್ಧಾರದಿಂದ ಬೇಸರಗೊಂಡರು ಆದರೆ ದಶಕಗಳ ಕಾಲ ನೀವು ಭಾರತೀಯ ಕ್ರಿಕೆಟ್ ಗೆ ನೀಡಿದ ಕೊಡುಗೆಗೆ ಧನ್ಯವಾದ ಅರ್ಪಿಸಿದರು.

ಭಾರತ ಕಂಡ ಅತ್ಯಂತ ಶ್ರೇಷ್ಠ ನಾಯಕ ನೀವು. ನಿಮ್ಮ ದಾಖಲೆಗಳು, ಸಾಧನೆಗಳು ಚರಿತ್ರಾರ್ಹವಾಗಲಿದೆ. ಕಷ್ಟದ ಸಮಯದಲ್ಲೂ ನೀವು ನಿಭಾಯಿಸುವ ರೀತಿ, ಪಂದ್ಯವನ್ನು ಮುಗಿಸುವ ರೀತಿ ಸ್ಮರಣೀಯ. ಆದರೆ ಮಹೇಂದ್ರ ಸಿಂಗ್ ಧೋನಿ ಎಂದರೆ ಕೇವಲ ಕ್ರಿಕೆಟಿಗನಾಗಿ ಮಾತ್ರ ನೆನಪಿನಲ್ಲುಳಿಯುವವರಲ್ಲ.

ಒಂದು ಸಣ್ಣ ಹಳ್ಳಿಯಿಂದ ಬಂದು ವಿಶ್ವವೇ ಮೆಚ್ಚುವ ಸಾಧನೆ ಸಾಮಾನ್ಯ ಮಾತಲ್ಲ. ನಿಮ್ಮ ಸಾಧನೆ ಕೋಟ್ಯಂತರ ಯುವಕರಿಗೆ ಸ್ಪೂರ್ತಿ. ಇಂದಿನ ಯುವಕರು ರಿಸ್ಕ್ ತೆಗೆದುಕೊಳ್ಳಲು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ಅದನ್ನು ನೀವು 2007 ರ ವಿಶ್ವಕಪ್ ನಲ್ಲೇ ಮಾಡಿ ತೋರಿಸಿದ್ದೀರಿ.

ನಿಮ್ಮ ಕೇಶ ಶೈಲಿ ಬದಲಾದರೂ ನೀವು ಮಾತ್ರ ಸದಾ ಕೂಲ್ ಆಗಿಯೇ ಉಳಿದಿರಿ. ಭಾರತೀಯ ಸೇನೆಯ ಜತೆಗೆ ನಿಮ್ಮ ನಂಟಿನ ಬಗೆಯೂ ನಾನು ಉಲ್ಲೇಖಿಸಲು ಬಯಸುತ್ತೇನೆ. ಅವರ ಬಗ್ಗೆ ನಿಮಗಿರುವ ಕಾಳಜಿ ಗಮನಾರ್ಹ.

ಮುಂದಿನ ದಿನಗಳಲ್ಲಿ ಸಾಕ್ಷಿ ಮತ್ತು ಜೀವಾ ನಿಮ್ಮ ಜತೆಗೆ ಕಳೆಯಲು ಸಾಕಷ್ಟು ಸಮಯ ಸಿಗುತ್ತದೆ. ಅವರಿಗೂ ನಾನು ಶುಭ ಹಾರೈಸುತ್ತೇನೆ. ಯಾಕೆಂದರೆ ಅವರ ತ್ಯಾಗವಿಲ್ಲದೇ, ಬೆಂಬಲವಿಲ್ಲದೇ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ಮೈದಾನದಲ್ಲಿ ಎಲ್ಲರೂ ಇರುವಾಗ ನೀವು ನಿಮ್ಮ ಮಗಳ ಜತೆಗೆ ಆಡುವ ಫೋಟೋವನ್ನು ನಾನು ನೋಡಿದ್ದೆ. ಅದು ಧೋನಿ ಎಂದರೆ. ನಿಮಗೆ ಎಲ್ಲಾ ರೀತಿಯಲ್ಲೂ ಶುಭವಾಗಲಿ,

ಇಂತಿ,
ನರೇಂದ್ರ ಮೋದಿ

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನೈ ತಂಡದೊಂದಿಗೆ ಯುಎಇಗೆ ಪ್ರಯಾಣ ಬೆಳೆಸಲ್ಲ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್