Publish Date: Thursday, 20 August 2020 (12:56 IST)
Updated Date: Thursday, 20 August 2020 (12:57 IST)
ಹೈದರಾಬಾದ್: ಸನ್ ರೈಸರ್ಸ್ ತಂಡದ ಪರ ಐಪಿಎಲ್ ಆಡುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಇತ್ತೀಚೆಗೆ ಕೆಲವು ತೆಲುಗು ಹಾಡುಗಳಿಗೆ ಸ್ಟೆಪ್ ಹಾಕಿ ತವರಿನ ಅಭಿಮಾನಿಗಳಿಗೆ ಖುಷಿ ನೀಡಿದ್ದರು. ಇದೀಗ ವಾರ್ನರ್ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.
ವಾರ್ನರ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ತೆಲುಗಿನ ಬಾಹುಬಲಿ ಸಿನಿಮಾದ ಪ್ರಭಾಸ್ ದೃಶ್ಯಕ್ಕೆ ತಮ್ಮ ಮುಖವನ್ನು ಎಡಿಟ್ ಮಾಡಿ ವಿಡಿಯೋ ಪ್ರಕಟಿಸಿದ್ದು, ಇದು ಯಾವ ಮೂವಿ ಗೆಸ್ ಮಾಡಿ ಎಂದು ಬರೆದುಕೊಂಡಿದ್ದಾರೆ.
ವಾರ್ನರ್ ರ ಈ ಬಾಹುಬಲಿ ಅವತಾರ ನೋಡಿ ಅಭಿಮಾನಿಗಳು ಬಾಹುಬಲಿ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟಿರುವುದಲ್ಲದೆ, ನೀವೂ ಸಖತ್ತಾಗಿ ಕಾಣಿಸುತ್ತೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.