ಕರಾಚಿ: ಸದಾ ಭಾರತದ ಜತೆ ಕ್ರಿಕೆಟ್ ಸರಣಿ ಆಯೋಜಿಸುವ ಬಗ್ಗೆ ಚಿಂತೆ ಮಾಡುವ ಬದಲು ದೇಶದ ಕ್ರಿಕೆಟ್ ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆಸಿ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಕಿಡಿ ಕಾರಿದ್ದಾರೆ.
‘ಅವರಿಗೆ ನಮ್ಮ ಜತೆ ಆಡಲು ಇಷ್ಟವಿಲ್ಲ. ಹಾಗಾದ್ರೆ ಅವರನ್ನು ಬಿಟ್ಟು ಬಿಡಿ. ಇದರಿಂದ ನಮ್ಮ ದೇಶದಲ್ಲಿ ಕ್ರಿಕೆಟ್ ಏನೂ ಸತ್ತು ಹೋಗಲ್ಲ. ಅವರನ್ನು ಮರೆತು ನಾವು ಮುನ್ನಡೆಯಬೇಕು’ ಎಂದು ಮಿಯಾಂದಾದ್ ಪಾಕ್ ಕ್ರಿಕೆಟ್ ಮಂಡಳಿಗೆ ಸಲಹೆ ನೀಡಿದ್ದಾರೆ.
‘ಅವರು ನಮ್ಮ ಜತೆ ಕಳೆದ 10 ವರ್ಷಗಳಿಂದ ಆಡಿಲ್ಲ. ಅದರಿಂದೇನಾಯಿತು? ನಮ್ಮ ದೇಶದಲ್ಲಿ ಕ್ರಿಕೆಟ್ ಅವನತಿಗೆ ಇಳಿದಿದೆಯೇ? ನಾವು ಇನ್ನೂ ಉತ್ತಮವಾಗಿ ಆಡಿದ್ದೇವೆ. ಚಾಂಪಿಯನ್ಸ್ ಟ್ರೋಫಿ ಗೆಲುವೇ ಅದಕ್ಕೆ ಉತ್ತಮ ಉದಾಹರಣೆ. ನಾವು ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳಿಲ್ಲದೆಯೂ ಬದುಕಿದ್ದೇವೆ’ ಎಂದು ಮಿಯಾಂದಾದ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ