ನವದೆಹಲಿ: ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದದಲ್ಲಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್ ಮನ್ ಗಳಾದ ಯುವರಾಜ್ ಸಿಂಗ್ ಮತ್ತು ವಿರಾಟ್ ಕೊಹ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ್ದರು ಎಂದು ಕೇಂದ್ರ ಸಚಿವ ರಾಮದಾಸ್ ಅಥವಾಲೆ ಗಂಭೀರ ಆರೋಪ ಮಾಡಿದ್ದಾರೆ.
ಪಾಕಿಸ್ತಾನದ ವಿರುದ್ಧ ಫೈನಲ್ ಪಂದ್ಯದಲ್ಲಿ ಇವರಿಬ್ಬರೂ ಬ್ಯಾಟ್ಸ್ ಮನ್ ಗಳು ಕಳಪೆ ಮೊತ್ತಕ್ಕೆ ಔಟಾಗಿದ್ದರು. 2009 ರ ಟಿ 20 ವಿಶ್ವಕಪ್ ಪಂದ್ಯವಾದ ಮೇಲೆ ಸ್ವಲ್ಪವೂ ಸುಧಾರಿತ ಪ್ರದರ್ಶನ ತೋರದ ಪಾಕಿಸ್ತಾನ ಇದ್ದಕ್ಕಿದ್ದಂತೆ ಭಾರತದ ವಿರುದ್ಧ ಆ ಮಟ್ಟಕ್ಕೆ ಆಡಲು ಸಾಧ್ಯವಾಗಿದ್ದು ಹೇಗೆ?
ಯುವರಾಜ್ ಸಿಂಗ್ ಮತ್ತು ಕೊಹ್ಲಿ ಅತ್ಯುತ್ತಮ ಫಾರ್ಮ್ ನಲ್ಲಿದ್ದವರು. ಆ ಪಂದ್ಯದಲ್ಲಿ ಮಾತ್ರ ಅಂತಹ ಸನ್ನಿವೇಶದಲ್ಲಿ ಕಳಪೆ ಮೊತ್ತಕ್ಕೆ ಹೇಗೆ ವಿಕೆಟ್ ಒಪ್ಪಿಸಿದರು? ಇದೆಲ್ಲದರ ಬಗ್ಗೆ ತನಿಖೆಯಾಗಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ. ಇದೀಗ ಸಚಿವರ ಹೇಳಿಕೆ ಭಾರೀ ವಿವಾದವೆಬ್ಬಿಸುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ