ಕೊಲೊಂಬೊ: ಕೆಎಲ್ ರಾಹುಲ್ ಎಂಬ ಅಪ್ಪಟ ಕನ್ನಡಿಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ 190 ರ ಆಸುಪಾಸಿನಲ್ಲಿ ಔಟಾದಾಗ ಅದೆಷ್ಟು ನಿರಾಸೆ ಅನುಭವಿಸಿದ್ದೆವು. ಆದರೆ ಆ ನಿರಾಸೆಯ ಸರಣಿ ರಾಹುಲ್ ಪಾಲಿಗೆ ಇನ್ನೂ ಮುಂದುವರಿದಿದೆ ಎನ್ನುವುದೇ ವಿಪರ್ಯಸ.
ಆ ಸರಣಿಯ ನಂತರ ಅವರು ಆಸ್ಟ್ರೇಲಿಯಾ, ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಆಡಿದ್ದಾರೆ. ಎಲ್ಲಾ ಪಂದ್ಯಗಳಲ್ಲೂ ತಂಡಕ್ಕೆ ಬೇಕಾಗಿದ್ದ ಇನಿಂಗ್ಸ್ ಕಟ್ಟಿಕೊಟ್ಟಿದ್ದಾರೆ. ಭದ್ರ ತಳಪಾಯಕ್ಕೆ ಬುನಾದಿ ಹಾಕಿಕೊಟ್ಟಿದ್ದಾರೆ.
ಆದರೆ ದುರಾದೃಷ್ಟ ನೋಡಿ. ಒಮ್ಮೆಯೂ ಅವರಿಂದ ಶತಕ ಬಂದಿಲ್ಲ. ಅರ್ಧಶತಕಗಳಲ್ಲೇ ದಾಖಲೆ ಮಾಡಿದರೂ ಶತಕ ಮಾತ್ರ ಒಲಿಯಲಿಲ್ಲ. ಇನ್ನೇನು ಶತಕ ಗಳಿಸುತ್ತಾರೆ ಎನ್ನುವಾಗ ಪ್ರತೀ ಬಾರಿಯೂ ಎಡವುತ್ತಾರೆ. ಹಾಗೆಂದು ಅವರು ಶಿಖರ್ ಧವನ್ ರಷ್ಟು ಗಡಿಬಿಡಿಯ ಆಟಗಾರರಲ್ಲ.
ಹಾಗಿದ್ದರೂ ದೊಡ್ಡ ಮೊತ್ತ ಗಳಿಸಲಾಗುತ್ತಿಲ್ಲ ಎಂಬ ನಿರಾಸೆ ಅವರಿಗಿದೆ. ನಿನ್ನೆ ಕೂಡಾ ಮತ್ತೊಮ್ಮೆ ಅರ್ಧಶತಕ ಗಳಿಸಿ ಔಟಾಗುವುದರೊಂದಿಗೆ ಬ್ರೇಕ್ ನ ನಂತರವೂ ಅವರ ಅದೃಷ್ಟ ಬದಲಾಗಲಿಲ್ಲವಲ್ಲಾ ಎನ್ನುವಂತಿತ್ತು.