Publish Date: Sat, 13 Apr 2019 (08:49 IST)
Updated Date: Sat, 13 Apr 2019 (08:51 IST)
ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ತಂಡ ಏಪ್ರಿಲ್ 15 ರಂದು ಬಿಸಿಸಿಐ ಪ್ರಕಟಿಸಲಿದ್ದು, ಯಾವ ಆಟಗಾರರು ಆಯ್ಕೆಯಾಗಬಹುದು ಎಂಬ ಚರ್ಚೆಗಳು ಜೋರಾಗಿ ನಡೆದಿದೆ.
ಇದೀಗ ಪ್ರಮುಖವಾಗಿ ಟೀಂ ಇಂಡಿಯಾಕ್ಕೆ ಆಲ್ ರೌಂಡರ್ ಮತ್ತು ನಾಲ್ಕನೇ ಕ್ರಮಾಂಕದ ಆಟಗಾರನ ಹೊರತಾಗಿ ಬೇರೆಲ್ಲಾ ಆಟಗಾರರ ಹೆಸರು ಫೈನಲ್ ಆಗಿದೆ ಎನ್ನಲಾಗಿದೆ. ಹಾಗಿದ್ದರೆ ಆ ಎರಡು ಸ್ಥಾನಗಳ ಪೈಕಿ ಯಾವ ಆಟಗಾರರು ಆಯ್ಕೆಯಾಗಬಹುದು ಎಂಬ ಚರ್ಚೆ ನಡೆದಿದೆ.
ಮೂಲಗಳ ಪ್ರಕಾರ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ ಐಪಿಎಲ್ ಫಾರ್ಮ್ ನ ಹೊರತಾಗಿಯೂ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ನಾಲ್ಕನೇ ಕ್ರಮಾಂಕಕ್ಕೆ ದಿನೇಶ್ ಕಾರ್ತಿಕ್ ಅಥವಾ ಅಂಬಟಿ ರಾಯುಡು ಅವರನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದ್ದು, ರಾಹುಲ್ ಆಯ್ಕೆಗಾರರ ಅವಕೃಪೆಗೆ ಒಳಗಾಗುವ ಸಾಧ್ಯತೆ ಇದೆ. ಹೀಗಾದರೆ ಚೊಚ್ಚಲ ಬಾರಿಗೆ ವಿಶ್ವಕಪ್ ತಂಡದಲ್ಲಿ ಆಡುವ ಅವಕಾಶದಿಂದ ರಾಹುಲ್ ವಂಚಿತರಾಗಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ