ಸಿಡ್ನಿ: ಭಾರತದ ಮೂರನೇ ಟೆಸ್ಟ್ ಪಂದ್ಯದ ಐದನೇ ದಿನದಾಟದ ವೇಳೆ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ರಿಷಬ್ ಪಂತ್ ಬ್ಯಾಟಿಂಗ್ ಗಾರ್ಡ್ ಅಳಿಸಿ ವಿವಾದಕ್ಕೀಡಾಗಿದ್ದರು. ಈ ವಿವಾದದ ಬಗ್ಗೆ ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯಿಸಿದ್ದಾರೆ.
ಸ್ಟೀವ್ ಸ್ಮಿತ್ ಅಮಾಯಕ. ಅವರು ತಪ್ಪು ಮಾಡಿಲ್ಲ. ಅವರು ಕೇವಲ ತಮಾಷೆಗಾಗಿ ಈ ರೀತಿ ಮಾಡಿದರು. ಕೆಲವೊಮ್ಮೆ ಅವರು ಈ ರೀತಿ ಮಾಡುತ್ತಿರುತ್ತಾರೆ. ಅವರು ಹಲವು ಬಾರಿ ಈ ರೀತಿ ಮಾಡಿದ್ದಾರೆ. ತಾನೇ ಬ್ಯಾಟಿಂಗ್ ಮಾಡುತ್ತಿದ್ದೇನೆ ಎಂಬ ಭಾವದಲ್ಲಿರುತ್ತಾರೆ. ನಾವು ಈ ಬಗ್ಗೆ ಹಲವು ಬಾರಿ ಅವರನ್ನು ತಮಾಷೆ ಮಾಡಿದ್ದೇವೆ ಎಂದು ಲ್ಯಾಂಗರ್ ತಮ್ಮ ಆಟಗಾರನ ತಪ್ಪಿಗೆ ತೇಪೆ ಹಾಕುವ ಪ್ರಯತ್ನ ಮಾಡಿದ್ದಾರೆ.