Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಪಿಎಲ್ ಸಂಭಾವನೆ ದೇಣಿಗೆ ನೀಡಲು ಮುಂದಾದ ಜಯದೇವ್ ಉನಾದ್ಕಟ್

ಐಪಿಎಲ್ ಸಂಭಾವನೆ ದೇಣಿಗೆ ನೀಡಲು ಮುಂದಾದ ಜಯದೇವ್ ಉನಾದ್ಕಟ್
ನವದೆಹಲಿ , ಶನಿವಾರ, 1 ಮೇ 2021 (07:54 IST)
ನವದೆಹಲಿ: ಕೊರೋನಾ ಸಂಕಷ್ಟದಲ್ಲಿರುವ ಭಾರತದ ಸಹಾಯಕ್ಕೆ ವಿದೇಶೀ ಕ್ರಿಕೆಟಿಗರು ಧಾವಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟಿಗ, ಐಪಿಎಲ್ ನ ರಾಜಸ್ಥಾನ್ ರಾಯಲ್ಸ್ ಆಟಗಾರ ಜಯದೇವ ಉನಾದ್ಕಟ್ ಕೂಡಾ ಸಹಾಯ ಮಾಡಲು ಮುಂದಾಗಿದ್ದಾರೆ.


ಐಪಿಎಲ್ ನಲ್ಲಿ ತಮಗೆ ಸಿಗುವ ವೇತನದ ಶೇ.10 ರಷ್ಟು ಹಣವನ್ನು ಕೊರೋನಾ ಪರಿಹಾರ ನಿಧಿಗೆ ನೀಡಲು ಜಯದೇವ್ ಉನಾದ್ಕಟ್ ತೀರ್ಮಾನಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಅವರು ಹೇಳಿಕೊಂಡಿದ್ದಾರೆ.

‘ಕೊರೋನಾಗೆ ಅಗತ್ಯವಿರುವ ವೈದ್ಯಕೀಯ ಸೇವೆ ಖರೀದಿಸಲು ನಾನು ಐಪಿಎಲ್ ಸಂಭಾವನೆಯ ಶೇ.10 ರಷ್ಟನ್ನು ದೇಣಿಗೆ ನೀಡುತ್ತಿದ್ದೇನೆ. ನನ್ನ ಕುಟುಂಬಸ್ಥರು ಇದನ್ನು ಸರಿಯಾದ ಸ್ಥಳಕ್ಕೆ ತಲುಪಿಸುತ್ತಾರೆ’ ಎಂದು ವಿಡಿಯೋ ಸಂದೇಶ ಮೂಲಕ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದಿದ್ದರೆ ಈ ದೇಶದಲ್ಲಿ ನಡೆಯಲಿದೆ ಟಿ20 ವಿಶ್ವಕಪ್