Publish Date: Thu, 30 Jul 2020 (13:26 IST)
Updated Date: Thu, 30 Jul 2020 (13:27 IST)
ಮುಂಬೈ: ಐಸಿಸಿ ಪ್ರಕಟಿಸಿರುವ ಲೇಟೆಸ್ಟ್ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕೊರೋನಾದಿಂದಾಗಿ ಸದ್ಯಕ್ಕೆ ಕ್ರಿಕೆಟ್ ಪಂದ್ಯಗಳು ನಡೆಯುತ್ತಿಲ್ಲ. ಅದಕ್ಕೂ ಮೊದಲು ಗಾಯದಿಂದಾಗಿ ಬುಮ್ರಾ ಕ್ರಿಕೆಟ್ ನಿಂದ ದೂರವಿದ್ದರು. ಇದು ಅವರ ಶ್ರೇಯಾಂಕದ ಮೇಲೆ ಪರಿಣಾಮ ಬೀರಿದೆ.
ಆದರೆ ಪ್ರಸಕ್ತ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ 500 ವಿಕೆಟ್ ಗಳ ದಾಖಲೆ ಮಾಡಿದ್ದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಮೂರನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.