ಮುಂಬೈ: ಐಪಿಎಲ್ ನ ಈ ವರ್ಷದ ಆವೃತ್ತಿಗೆ ಇಂದು ಚೆನ್ನೈನಲ್ಲಿ ಚಾಲನೆ ಸಿಗಲಿದೆ. ಅದಕ್ಕಿಂತ ಮೊದಲು ಐಪಿಎಲ್ ನಲ್ಲಿ ಅತೀ ಹೆಚ್ಚು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದವರು ಯಾರು ಎಂದು ನೋಡೋಣ.
ಐಪಿಎಲ್ ಎಂದರೆ ವರ್ಣರಂಜಿತ ಕೂಟ. ಸಿಕ್ಸರ್, ಬೌಂಡರಿಗಳ ಗುಡುಗು ಇಲ್ಲಿ ಇದ್ದೇ ಇರುತ್ತದೆ. ಸಂಪೂರ್ಣ ಬ್ಯಾಟ್ಸ್ ಮನ್ ಗಳೇ ಇಲ್ಲಿ ವಿಜೃಂಭಿಸುವುದು ಹೆಚ್ಚು.
ಐಪಿಎಲ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅದು ಎಲ್ಲರಿಗೂ ಗೊತ್ತಿರುವುದೇ. ಹಾಗಿದ್ದರೆ ಅತೀ ಹೆಚ್ಚು ಬೌಂಡರಿ ಗಳಿಸಿದವರು ಯಾರು ಗೊತ್ತೇ?
ಬೇರೆ ಯಾರೂ ಅಲ್ಲ, ಭಾರತದವರೇ ಆದ ಗೌತಮ್ ಗಂಭೀರ್. ಗಂಭೀರ್ ಈಗ ನಿವೃತ್ತರಾಗಿದ್ದಾರೆ. ಆದರೆ ಇದಕ್ಕಿಂತ ಮೊದಲು ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದವರು. ಬಳಿಕ ತವರು ಡೆಲ್ಲಿ ಪರವೂ ಆಡಿದ್ದರು. ಗಂಭೀರ್ ಐಪಿಎಲ್ ನಲ್ಲಿ 154 ಪಂದ್ಯಗಳಿಂದ 491 ಬೌಂಡರಿ ಸಿಡಿಸಿ ಅಗ್ರ ಸ್ಥಾನದಲ್ಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ