ದುಬೈ: 147 ವರ್ಷಗಳ ಇತಿಹಾಸವಿರುವ ಟೆಸ್ಟ್ ಕ್ರಿಕೆಟ್ ನಲ್ಲಿ ಇದುವರೆಗೆ ಎಲ್ಲಾ ತಂಡಗಳೂ ಬಿಳಿ ಬಣ್ಣದ ಸಮವಸ್ತ್ರ ಧರಿಸಿಯೇ ಆಡುವುದು ವಾಡಿಕೆಯಾಗಿತ್ತು.
ಆದರೆ ಈ ಇತಿಹಾಸಕ್ಕೆ ಈಗ ಬ್ರೇಕ್ ಬೀಳುವ ಸಾಧ್ಯತೆಯಿದೆ. ಏಕದಿನ, ಟಿ20 ಪಂದ್ಯಗಳಂತೆ ಟೆಸ್ಟ್ ಕ್ರಿಕೆಟ್ ನಲ್ಲೂ ಆಯಾ ದೇಶದ ಆಟಗಾರರು ಕಲರ್ ಕಲರ್ ಜೆರ್ಸಿ ತೊಟ್ಟು ಆಡುವ ಪ್ರಸ್ತಾಪವನ್ನು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಚಿಂತಕರು ಐಸಿಸಿ ಮುಂದೆ ಶಿಫಾರಸ್ಸು ಮಾಡಿದ್ದಾರೆ.
ಇದನ್ನು ಐಸಿಸಿ ಬಹುತೇಕ ಒಪ್ಪಿಕೊಳ್ಳುವ ಸಾಧ್ಯತೆಯಿದ್ದು, ಎಲ್ಲಾ ಸರಿ ಹೋದರೆ ಮುಂಬರುವ ಆಗಸ್ಟ್ ನಲ್ಲಿ ಎಡ್ಜ್ ಬಾಸ್ಟನ್ ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಪ್ರಾಯೋಗಿಕವಾಗಿ ಬಳಕೆಯಾಗುವ ಸಾಧ್ಯತೆಯಿದೆ. ಆ ಮೂಲಕ ಟೆಸ್ಟ್ ಕ್ರಿಕೆಟ್ ಗೆ ಹೊಸ ರಂಗು ನೀಡಲು ಐಸಿಸಿ ತೀರ್ಮಾನಿಸುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ