ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಕಿವೀಸ್ ವೇಗಿ ಟ್ರೆಂಟ್ ಬೌಲ್ಟ್ ನಡುವಿನ ಕಾದಾಟ ನೋಡಲು ಉತ್ಸುಕನಾಗಿರುವುದಾಗಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಈ ಪಂದ್ಯದಲ್ಲಿ ಈ ಇಬ್ಬರು ಕಲಿಗಳ ನಡುವಿನ ಆಟ ಆಸಕ್ತಿದಾಯಕವಾಗಿರಲಿದೆ. ಒಂದು ವೇಳೆ ಬೌಲ್ಟ್ ರ ಆರಂಭಿಕ ಸ್ಪೆಲ್ ಎದುರಿಸಿ ರೋಹಿತ್ ಕ್ರೀಸ್ ಗೆ ಸೆಟ್ಟಾದರೆ ಅದಾದ ಬಳಿಕ ಅವರ ಆಟ ನೋಡುವುದೇ ಚಂದ ಎಂದು ಸೆಹ್ವಾಗ್ ಹೇಳಿದ್ದಾರೆ.
ಇನ್ನು, ಈ ಪಂದ್ಯದಲ್ಲಿ ಭಾರತೀಯರಿಗೆ ವೇಗಿಗಳಾದ ಬೌಲ್ಟ್ ಮತ್ತು ಟಿಮ್ ಸೌಥಿ ಸವಾಲೊಡ್ಡಲಿದ್ದಾರೆ. ರೋಹಿತ್ ಆರಂಭದ 10 ಓವರ್ ಎಚ್ಚರಿಕೆಯಿಂದ ಆಡಬೇಕು. ಸೆಟ್ ಆದ ಬಳಿಕ ರನ್ ಗಳಿಸುವುದು ಸುಲಭ. ಹಿಂದೆಯೂ ಇಂಗ್ಲೆಂಡ್ ನಲ್ಲಿ ಅವರು ಉತ್ತಮವಾಗಿ ರನ್ ಗಳಿಸಿದ್ದಾರೆ. ಹೀಗಾಗಿ ಈ ಬಾರಿಯೂ ರನ್ ಗಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.