Publish Date: Wed, 09 Dec 2020 (10:13 IST)
Updated Date: Wed, 09 Dec 2020 (10:15 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಮತ್ತು ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಟೆಸ್ಟ್ ನಲ್ಲಿ ಕಮ್ ಬ್ಯಾಕ್ ಮಾಡಲಿದ್ದಾರೆಯೇ? ಇದಕ್ಕೆ ಅವರ ಪ್ರತಿಕ್ರಿಯೆ ಏನು ಗೊತ್ತಾ?
ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಹಾರ್ದಿಕ್ ಇಲ್ಲವೆಂದಿದ್ದಾರೆ. ಅಲ್ಲದೆ, ಟಿ20 ಸರಣಿಯಲ್ಲಿ ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿರುವ ಹಾರ್ದಿಕ್ ನನ್ನ ಮಗನ ಮುಖ ನೋಡದೇ ನಾಲ್ಕು ತಿಂಗಳಾಗಿದೆ. ಸದ್ಯಕ್ಕೆ ಮನೆಗೆ ಹೋಗಿ ಕೆಲವು ದಿನ ಕುಟುಂಬದೊಂದಿಗೆ ಕಾಲ ಕಳೆಯುತ್ತೇನೆ ಎಂದಿದ್ದಾರೆ.