Publish Date: Fri, 03 May 2019 (06:30 IST)
Updated Date: Fri, 03 May 2019 (06:33 IST)
ಮುಂಬೈ: ಮುಂಬೈ ಇಂಡಿಯನ್ಸ್ ಪರ ಐಪಿಎಲ್ ಆಡುವ ಟೀಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಡ್ರೆಸ್ ಬಗ್ಗೆ ವಿಪರೀತ ಕಾಳಜಿ ವಹಿಸುತ್ತಾರೆ.
ಸ್ಟೈಲಿಶ್ ಡ್ರೆಸ್, ಚೈನು, ಬ್ರೇಸ್ ಲೆಟ್ ಗಳಿಲ್ಲದೇ ಅವರು ಹೊರಗೆ ಕಾಣಿಸಿಕೊಳ್ಳುವವರೇ ಅಲ್ಲ. ಇದೀಗ ಪಾಂಡ್ಯ ಒಂದು ವಿಶೇಷ ಟಿ-ಶರ್ಟ್ ಧರಿಸಿಕೊಂಡು ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ಆ ಟಿ ಶರ್ಟ್ ಬೆಲೆ ಕೇಳಿದರೆ ಬೆಚ್ಚಿಬೀಳುವುದು ಖಚಿತ!
ಯಾಕೆಂದರೆ ಈ ಟಿ ಶರ್ಟ್ ಬೆಲೆ ಬರೋಬ್ಬರಿ 1,01,999 ರೂ.ಗಳು! ಈ ಬೆಲೆಗೆ ಮುಂಬೈನ ಬಾಂದ್ರಾದಂತಹ ಪ್ರತಿಷ್ಠಿತ ಬಡಾವಣೆಯಲ್ಲಿ ಮೂರು ಬೆಡ್ ರೂಂ ಮನೆಯನ್ನು ಬಾಡಿಗೆಗೆ ಪಡೆದುಕೊಳ್ಳಬಹುದು! ಅಷ್ಟೊಂದು ದುಬಾರಿ ಈ ಟಿ ಶರ್ಟ್!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
Krishnaveni K
Publish Date: Fri, 03 May 2019 (06:30 IST)
Updated Date: Fri, 03 May 2019 (06:33 IST)