ಮುಂಬೈ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಹೆಸರನ್ನು ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಪಟ್ಟಿಯಿಂದ ಹಿಂತೆಗೆದ ಪಂಜಾಬ್ ಸರ್ಕಾರದ ನಿರ್ಧಾರವನ್ನು ಹಲವರು ಪ್ರಶ್ನಿಸಿದ್ದರು. ಆದರೆ ಇದರ ಹಿಂದಿನ ನಿಜ ಕಾರಣವನ್ನು ಸ್ವತಃ ಭಜಿ ಬಹಿರಂಗಪಡಿಸಿದ್ದಾರೆ.
ಖೇಲ್ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಪ್ರಮುಖವಾಗಿ ಆಟಗಾರ ಕಳೆದ ಮೂರು ವರ್ಷದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿರಬೇಕು. ಆದರೆ ನಾನು ಕಳೆದ ಮೂರು ವರ್ಷಗಳಿಂದ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ನನ್ನ ಹೆಸರು ಪರಿಗಣಿಸುವುದು ಬೇಡ ಎಂದು ನಾನೇ ಪಂಜಾಬ್ ಸರ್ಕಾರಕ್ಕೆ ಮನವಿ ಮಾಡಿದ್ದೆ. ಹೀಗಾಗಿ ನನ್ನ ಹೆಸರನ್ನು ಹಿಂತೆಗೆಯಲಾಗಿದೆ ಎಂದು ಭಜಿ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿ ವಿವಾದಕ್ಕೆ ಮಂಗಳ ಹಾಡಿದ್ದಾರೆ.