Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಪಿಎಲ್ ಗಾಗಿ ಯುಎಇಗೆ ತೆರಳಲು ಪ್ರತ್ಯೇಕ ವಿಮಾನ ಬಾಡಿಗೆ ಪಡೆಯಲಿರುವ ಫ್ರಾಂಚೈಸಿಗಳು

ಐಪಿಎಲ್ ಗಾಗಿ ಯುಎಇಗೆ ತೆರಳಲು ಪ್ರತ್ಯೇಕ ವಿಮಾನ ಬಾಡಿಗೆ ಪಡೆಯಲಿರುವ ಫ್ರಾಂಚೈಸಿಗಳು
ಮುಂಬೈ , ಭಾನುವಾರ, 19 ಜುಲೈ 2020 (09:20 IST)
ಮುಂಬೈ: ಈ ಬಾರಿಯ ಐಪಿಎಲ್ ಯುಎಇ ರಾಷ್ಟ್ರದಲ್ಲಿ ನಡೆಯುವುದು ಹೆಚ್ಚು ಕಡಿಮೆ ಪಕ್ಕಾ ಆಗಿದೆ. ಇದೀಗ ಕೇಂದ್ರದ ಒಪ್ಪಿಗೆಯೊಂದೇ ಬಾಕಿಯಿದೆ. ಹೀಗಾಗಿ ಐಪಿಎಲ್ ಫ್ರಾಂಚೈಸಿಗಳು 13 ನೇ ಆವೃತ್ತಿಯ ಕೂಟಕ್ಕಾಗಿ ತಯಾರಿ ಆರಂಭಿಸಿವೆ.


ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ಐಪಿಎಲ್ ನಡೆಯುವ ಸಾಧ‍್ಯತೆಯಿದ್ದು, ಆಗಸ್ಟ್ ನಿಂದಲೇ ತರಬೇತಿ ಶಿಬಿರ ಆರಂಭಿಸಬೇಕಾಗುತ್ತದೆ. ಆದರೆ ಅಷ್ಟರಲ್ಲಿ ಆಟಗಾರರಿಗೆ ಯುಎಇಗೆ ತೆರಳಲು ವಿಮಾನದ ವ್ಯವಸ್ಥೆಯಿರುತ್ತದೆ ಎಂದು ಹೇಳಲಾಗದು.

ಹೀಗಾಗಿ ‍ಫ್ರಾಂಚೈಸಿಗಳು ವಿಮಾನ ಬಾಡಿಗೆಗೆ ಪಡೆದು ಅದರಲ್ಲಿ ಆಟಗಾರರನ್ನು ಕರೆದೊಯ್ಯಲು ಯೋಜನೆ ರೂಪಿಸಿದೆಯಂತೆ. ಯುಎಇಗೆ ಆಟಗಾರರು ತೆರಳುವ ಮುನ್ನ ಭಾರತದಲ್ಲಿ ಒಟ್ಟು ಸೇರಿ ಕೆಲವು ದಿನ ಕ್ವಾರಂಟೈನ್ ಗೊಳಪಡಿಸಲೂ ಫ್ರಾಂಚೈಸಿಗಳು ಚಿಂತನೆ ನಡೆಸಿವೆ. ಐಪಿಎಲ್ 13 ಆರಂಭಿಸಲು ಬಿಸಿಸಿಐ ತೀರ್ಮಾನಿಸಿದ್ದೇ ತಡ, ಫ್ರಾಂಚೈಸಿಗಳು ಉತ್ಸಾಹದಿಂದಲೇ ತಯಾರಿ ಆರಂಭಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುಎಇಯಲ್ಲಿ ಐಪಿಎಲ್ 13: ಬಿಸಿಸಿಐ ಸಭೆಯಲ್ಲಿ ಮಹತ್ವದ ನಿರ್ಧಾರ