ಮುಂಬೈ: ಟೀಂ ಇಂಡಿಯಾ ಟಿ20 ನಾಯಕತ್ವ ವಿಚಾರವಾಗಿ ಮಾಜಿ ಕ್ರಿಕೆಟಿಗರಾದ ಗೌತಮ್ ಗಂಭೀರ್ ಮತ್ತು ಆಕಾಶ್ ಚೋಪ್ರಾ ಪರಸ್ಪರ ಕಿತ್ತಾಡಿಕೊಂಡ ಘಟನೆ ನಡೆದಿದೆ.
ಸಂದರ್ಶನವೊಂದರಲ್ಲಿ ಗಂಭೀರ್ ರೋಹಿತ್ ನಾಯಕರಾಗಲಿ ಎಂದು ಆಗ್ರಹಿಸಿದರೆ, ಅವರ ವಾದವನ್ನು ತಳ್ಳಿ ಹಾಕಿದ ಆಕಾಶ್ ಚೋಪ್ರಾ ವಿರಾಟ್ ಕೊಹ್ಲಿ ಪರವಾಗಿ ಬ್ಯಾಟ್ ಬೀಸಿದ್ದಾರೆ. ರೋಹಿತ್ ಕಿರು ಮಾದರಿಕ ಕ್ರಿಕೆಟ್ ನಾಯಕತ್ವಕ್ಕೆ ಹೇಳಿ ಮಾಡಿಸಿದವರು. ಕೊಹ್ಲಿ ಕೆಟ್ಟ ನಾಯಕರಲ್ಲ, ಆದರೆ ರೋಹಿತ್ ಅವರಿಗಿಂತ ಉತ್ತಮ ಎಂದರು. ಆದರೆ ಇದಕ್ಕೆ ತಿರುಗೇಟು ನೀಡಿದ ಚೋಪ್ರಾ ಟಿ20 ವಿಶ್ವಕಪ್ ಗೆ ಮೊದಲು ಐದಾರು ಟಿ20 ಪಂದ್ಯಗಳಿದೆಯಷ್ಟೇ. ಹೊಸ ನಾಯಕ, ತಂಡವನ್ನು ಕಟ್ಟಲು ಇನ್ನು ಹೆಚ್ಚು ಸಮಯವಿಲ್ಲ. ಹೊಸ ಫಿಲಾಸಫಿಗೆ ತಂಡ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಹೀಗಾಗಿ ನಾಯಕತ್ವ ಬದಲಾವಣೆಗೆ ಇದು ಸರಿಯಾದ ಸಮಯವಲ್ಲ ಎಂದು ವಾದಿಸಿದ್ದಾರೆ.