ಹೈದರಾಬಾದ್: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕಮಾತ್ರ ಟೆಸ್ಟ್ ಪಂದ್ಯದ ಮೊದಲ ದಿನ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರೂ ಚೇತೇಶ್ವರ ಪೂಜಾರ 83 ರನ್ ಗಳಿಸಿ ಔಟಾಗುವುದರೊಂದಿಗೆ ಶತಕ ವಂಚಿತರಾದರು. ಆದರೂ ಅವರು ಅಪರೂಪದ ದಾಖಲೆ ಮಾಡಿದ್ದಾರೆ.
ಅದೂ ಐದು ದಶಕದಷ್ಟು ಹಿಂದೆ ಚಂದು ಬೋರ್ಡೆ ಮಾಡಿದ್ದ ದಾಖಲೆಯನ್ನು ಪೂಜಾರ ನಿನ್ನೆ ಮುರಿದಿದ್ದಾರೆ. ಒಂದೇ ಋತುವಿನಲ್ಲಿ ಅತೀ ಹೆಚ್ಚು ರನ್ ಗಳಿಸಿದ ದೇಶೀಯ ದಾಖಲೆ ಬೋರ್ಡೆ ಹೆಸರಿನಲ್ಲಿತ್ತು. 1964-65 ರಲ್ಲಿ 1604 ರನ್ ಗಳಿಸಿ ಬೋರ್ಡೆ ಈ ದಾಖಲೆ ಮಾಡಿದ್ದರು.
ಅದನ್ನೀಗ ಪೂಜಾರ ಮುರಿದಿದ್ದಾರೆ. ಈ ಋತು ಮುಗಿಯಲು ಪೂಜಾರ ಇನ್ನೂ ನಾಲ್ಕು ಟೆಸ್ಟ್ ಆಡಬೇಕಿದೆ. ಹಾಗಾಗಿ ಖಂಡಿತವಾಗಿ ಅವರು 2000 ರನ್ ಗಳ ಗಡಿ ಮೀರುವುದು ಖಚಿತ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ