ಬೆಂಗಳೂರು: ನಮ್ಮ ದೇಶದಲ್ಲಿ ರಾಜಕಾರಣಿಯ ಮಗ ರಾಜಕಾರಣಿಯಾಗುತ್ತಾರೆ. ಸಿನಿಮಾ ತಾರೆಯರ ಮಕ್ಕಳು ಸಿನಿಮಾ ರಂಗಕ್ಕೆ ಬರುತ್ತಾರೆ. ಕೆಲವೊಂದು ನಿದರ್ಶನಗಳಲ್ಲಿ ಕ್ರಿಕೆಟಿಗರ ಮಕ್ಕಳೂ ಕ್ರಿಕೆಟಿಗರಾಗುವುದಿದೆ. ಅದೇ ರೀತಿ ರಾಹುಲ್ ದ್ರಾವಿಡ್ ಪುತ್ರ ಸಮಿತ್ ಮುಂದೇನಾಗುತ್ತಾನೆ?
ಹೀಗೊಂದು ಪ್ರಶ್ನೆಯನ್ನು ಸ್ವತಃ ದ್ರಾವಿಡ್ ಗೆ ಸಂದರ್ಶನವೊಂದರಲ್ಲಿ ಕೇಳಲಾಯಿತು. ಅದಕ್ಕೆ ದ್ರಾವಿಡ್ ರಕ್ಷಣಾತ್ಮಕವಾಗಿ ಉತ್ತರಿಸಿದರು. “ನನ್ನ ಮಗ ಕ್ರಿಕೆಟ್, ಫುಟ್ ಬಾಲ್ ಎಲ್ಲವನ್ನೂ ಆಸಕ್ತಿಯಿಂದ ಆಡುತ್ತಾನೆ. ಆದರೆ ಅವನಿಗೆ ಇನ್ನೂ 11 ವರ್ಷ. ಮುಂದೇನಾಗಬೇಕು ಎಂದು ತೀರ್ಮಾನಿಸಲು ಸಮಯವಿದೆ” ಎಂದಿದ್ದಾರೆ ದ್ರಾವಿಡ್.
ಹಾಗಿದ್ದರೆ ತಮ್ಮಂತೆ ಕ್ರಿಕೆಟರ್ ಆಗಿ ಪುತ್ರನನ್ನು ನೋಡುವಾಸೆಯಿಲ್ಲವೇ? ಎಂದಿದ್ದಕ್ಕೆ, ನನ್ನ ಒತ್ತಾಯವೇನಿಲ್ಲ. ಅವನಿಗೆ ಏನು ಇಷ್ಟವೋ ಅದನ್ನೇ ಮಾಡಲಿ ಎಂದು ಪಕ್ಕಾ ಒಳ್ಳೆಯ ಅಪ್ಪನಂತೆ ಉತ್ತರಿಸಿದ್ದಾರೆ ದ್ರಾವಿಡ್.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ