Publish Date: Mon, 03 Aug 2020 (13:17 IST)
Updated Date: Mon, 03 Aug 2020 (13:19 IST)
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಎಂದರೆ ಧೋನಿ ಎನ್ನುವಷ್ಟರ ಮಟ್ಟಿಗೆ ಐಪಿಎಲ್ ನಲ್ಲಿ ಮಹಿ ಪ್ರಭಾವವಿದೆ. ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುವ ವಿಚಾರದಲ್ಲೂ ಚೆನ್ನೈ ತಂಡದ ಮಾಲಿಕರು ಧೋನಿ ಮಾತಿಗೆ ಪ್ರಾಶಸ್ತ್ಯ ನೀಡುತ್ತಾರೆ.
ಇಂತಿಪ್ಪ ಧೋನಿ ಹಿಂದೊಮ್ಮೆ ತಮ್ಮ ತಂಡಕ್ಕೆ ಅತ್ಯದ್ಭುತ ಆಟಗಾರನನ್ನು ಕೊಳ್ಳುವುದಕ್ಕೆ ಅಡ್ಡಗಾಲು ಹಾಕಿದ್ದರಂತೆ. ಅದಕ್ಕೆ ಕಾರಣ ಆ ಆಟಗಾರ ತಂಡವನ್ನು ಹಾಳು ಮಾಡುತ್ತಾನೆ ಎಂದಿದ್ದರಂತೆ.
ಈ ವಿಚಾರವನ್ನು ಸ್ವತಃ ಸಿಎಸ್ ಕೆ ಮಾಲಿಕ ಎನ್. ಶ್ರೀನಿವಾಸನ್ ಬಹಿರಂಗಪಡಿಸಿದ್ದಾರೆ. ಆದರೆ ಆ ಆಟಗಾರ ಯಾರು ಎಂಬುದನ್ನು ಅವರು ಹೇಳಿಲ್ಲ. ಆದರೆ ಆತನಿಂದಾಗಿ ತಂಡದ ಒಗ್ಗಟ್ಟು ಹಾಳಾಗಬಹುದು ಎಂದು ಧೋನಿ ಭಯಪಟ್ಟಿದ್ದರಂತೆ.