Publish Date: Tue, 06 Mar 2018 (09:37 IST)
Updated Date: Tue, 06 Mar 2018 (09:40 IST)
ಡರ್ಬನ್: ದ.ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ಡರ್ಬನ್ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯಲ್ಲಿ ಆಸ್ಟ್ರೇಲಿಯಾ ಜಯ ಗಳಿಸಿದೆ. ಆದರೆ ಈ ಗೆಲುವಿಗಿಂತ ಹೆಚ್ಚು ಟೀ ಬ್ರೇಕ್ ವೇಳೆ ಡೇವಿಡ್ ವಾರ್ರ್ ಮತ್ತು ಕ್ವಿಂಟನ್ ಡಿ ಕಾಕ್ ನಡುವೆ ನಡೆದ ಜಗಳ ಸುದ್ದಿಯಾಗಿದೆ.
ಟೀ ಬ್ರೇಕ್ ವೇಳೆ ದ.ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಪೆವಿಲಿಯನ್ ಗೆ ಮರಳುತ್ತಿದ್ದರು. ಇವರನ್ನೇ ಕಾಯುತ್ತಿದ್ದ ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ಪೆವಿಲಿಯನ್ ಮೆಟ್ಟಿಲೇರುತ್ತಿದ್ದಾಗ ಜಗಳ ತೆಗೆದಿದ್ದಾರೆ. ಈ ವೇಳೆ ಇಬ್ಬರೂ ವಾಚಮಗೋಚರವಾಗಿ ಕಾದಾಡಿದ್ದಾರೆ.
ಆ ವೇಳೆ ತಂಡದ ಇತರ ಸದಸ್ಯರು ಸಮಾಧಾನಿಸಿ ಇಬ್ಬರನ್ನೂ ಒಳಗೆ ಕರೆಸಿದೆ. ಯಾವ ಕಾರಣಕ್ಕೆ ಘಟೆನ ನಡೆಯಿತು ಎಂದು ತಿಳಿದು ಬಂದಿಲ್ಲ. ಆದರೆ ಈ ಬಗ್ಗೆ ಎರಡೂ ತಂಡಗಳ ವ್ಯವಸ್ಥಾಪಕರು ಸಭೆ ನಡೆಸಿ ಚರ್ಚಿಸಿದ್ದಾರೆ. ಅಷ್ಟೇ ಅಲ್ಲ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ತನಿಖೆಗೆ ಆದೇಶಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ