Publish Date: Tue, 22 Dec 2020 (12:32 IST)
Updated Date: Tue, 22 Dec 2020 (12:33 IST)
ಮುಂಬೈ: ಕ್ರಿಕೆಟಿಗ ಸುರೇಶ್ ರೈನಾ, ಗಾಯಕ ಗುರು ರಾಂಧ್ವಾ ಸೇರಿದಂತೆ ಸುಮಾರು 34 ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ವಿಮಾನ ನಿಲ್ದಾಣದ ಬಳಿಯಿರುವ ಡ್ರಾಗನ್ ಫ್ಲೈ ಪಬ್ ಮೇಲೆ ದಾಳಿ ನಡೆಸಿದ ಪೊಲೀಸರು ಕೊವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ 34 ಮಂದಿಯನ್ನು ಬಂಧಿಸಿದ್ದಾರೆ. ಬಳಿಕ ಜಾಮೀನಿನ ಮೇಲೆ ಹೊರಬಿಡಲಾಗಿದೆ. ನಿಗದಿತ ಸಮಯ ಮೀರಿ ಈ ಪಬ್ ತೆರೆದಿತ್ತು. ಮಾತ್ರವಲ್ಲದೆ, ಇಲ್ಲಿದ್ದ ಕ್ರಿಕೆಟಿಗ ರೈನಾ ಸೇರಿದಂತೆ ಹಲವರು ಕೊವಿಡ್ ನಿಯಮವನ್ನೂ ಗಣನೆಗೇ ತೆಗೆದುಕೊಳ್ಳದೇ ಅಲ್ಲಿ ಎಂಜಾಯ್ ಮಾಡುತ್ತಿದ್ದರು. ಈ ಕಾರಣಕ್ಕೆ ಅವರನ್ನು ಬಂಧಿಸಲಾಯಿತು.
Krishnaveni K
Publish Date: Tue, 22 Dec 2020 (12:32 IST)
Updated Date: Tue, 22 Dec 2020 (12:33 IST)