ಸಿಡ್ನಿ: 2015 ರ ವಿಶ್ವಕಪ್ ಪಂದ್ಯದ ವೇಳೆ ಮಸಾಜ್ ಥೆರಪಿಸ್ಟ್ ಗೆ ಗುಪ್ತಾಂಗ ಪ್ರದರ್ಶಿಸಿದ್ದರೆಂದು ಆರೋಪಿಸಿದ್ದ ಪತ್ರಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದ ಕ್ರಿಕೆಟಿಗ ಕ್ರಿಸ್ ಗೇಲ್ ಗೆ ಆರಂಭಿಕ ಜಯ ಸಿಕ್ಕಿದೆ.
ಘಟನೆ ಬಗ್ಗೆ ಫೇರ್ ಫ್ಯಾಕ್ಸ್ ಮೀಡಿಯಾ ಸತ್ಯ ಸಾಬೀತು ಪಡಿಸಲು ವಿಫಲವಾಗಿದೆ ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಮಾನಕ್ಕೆ ಬಂದಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ಗೇಲ್ ಕೊನೆಗೂ ನನ್ನ ನಡತೆಗೆ ಅಂಟಿಕೊಂಡಿದ್ದ ಕಪ್ಪು ಚುಕ್ಕೆ ಅಳಿಸಿರುವುದಕ್ಕೆ ಖುಷಿಯಾಗಿದೆ ಎಂದಿದ್ದಾರೆ.
ಒಟ್ಟು ಮೂರು ಮಾಧ್ಯಮಗಳ ವಿರುದ್ಧ ಕ್ರಿಸ್ ಗೇಲ್ ವಕೀಲರು ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ಈ ಮಾಧ್ಯಮಗಳು ಎಷ್ಟು ಮೊತ್ತದ ಪರಿಹಾರ ಧನ ನೀಡಬೇಕೆಂದು ನಂತರವಷ್ಟೇ ನಿರ್ಧಾರವಾಗಬೇಕಿದೆ. ಆದರೆ ಮಾಧ್ಯಮ ಪರ ವಕೀಲರು ಪ್ರಕರಣದ ಬಗ್ಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ