ಹೈದರಾಬಾದ್: ನಿನ್ನೆಯಷ್ಟೇ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತೀ ವೇಗದ 250 ವಿಕೆಟ್ ಕಬಳಿಸಿದ ವಿಶ್ವದಾಖಲೆ ಮಾಡಿದ ಖುಷಿಯಲ್ಲಿರುವ ರವಿಚಂದ್ರನ್ ಅಶ್ವಿನ್ ರ ಯಶಸ್ಸಿನ ಗುಟ್ಟೇನೆಂದು ಸಹ ಆಟಗಾರ ಚೇತೇಶ್ವರ ಪೂಜಾರ ಬಯಲು ಮಾಡಿದ್ದಾರೆ.
ಪಿಚ್ ನಲ್ಲಿ ಸ್ವಲ್ಪ ಬಿರುಕು ಕಂಡುಬಂದರೂ ಸಾಕು. ಮತ್ತೆ ಅಶ್ವಿನ್ ರನ್ನು ಎದುರಿಸುವುದೇ ಕಷ್ಟ. ಯಾವುದೇ ಎದುರಾಳಿಯಿರಲಿ, ಅವರು ಎದುರಾಳಿಗಳಿಗೆ ಕಬ್ಬಿಣದ ಕಡಲೆಯಾಗುತ್ತಾರೆ. ಒಬ್ಬ ಬ್ಯಾಟ್ಸ್ ಮನ್ ನಂತೆ ಯೋಚನೆ ಮಾಡಿ ಬೌಲಿಂಗ್ ಮಾಡುವುದೇ ಅವರ ಯಶಸ್ಸಿನ ಹಿಂದಿನ ಗುಟ್ಟು ಎಂದು ಪೂಜಾರ ತಮ್ಮ ಸಹ ಆಟಗಾರನ ಗುಣಗಾನ ಮಾಡಿದ್ದಾರೆ.
“ಆತನ ಬುದ್ಧಿಮತ್ತೆಗೆ ಕ್ರೆಡಿಟ್ ಕೊಡಲೇ ಬೇಕು. ಒಬ್ಬ ಬ್ಯಾಟ್ಸ್ ಮನ್ ಹೇಗೆಲ್ಲಾ ಯೋಚಿಸುತ್ತಾನೆ, ಯೋಜನೆ ರೂಪಿಸಬಹುದು ಎಂದು ತಾವೇ ಯೋಚಿಸಿಕೊಂಡು ಬೌಲಿಂಗ್ ಮಾಡುತ್ತಾರೆ. ಅವರ ಈ ಅನುಭವವೇ ಅವರನ್ನು ಇಲ್ಲಿಯವರೆಗೆ ತಂದಿಟ್ಟಿದೆ” ಎಂದು ಪೂಜಾರ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ