ನವದೆಹಲಿ: ಜಹೀರ್ ಖಾನ್ ಈಗ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಅವರ ಪ್ರೀತಿಯ ಹುಡುಗಿ ಚಕ್ ದೇ ಇಂಡಿಯಾ ಸಿನಿಮಾ ಖ್ಯಾತಿಯ ಸಾಗರಿಕಾ ಘಾಟೆಯಂತೆ. ಹಾಗಂತ ರೂಮರ್ ಹಬ್ಬಿದೆ. ಈಗ ಸ್ವತಃ ಜಹೀರ್ ತಮ್ಮ ಗೆಳತಿಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ಯುವರಾಜ್ ಸಿಂಗ್ ಮದುವೆಗೆ ಕೈ ಕೈ ಹಿಡಿದು ಬಂದ ನಂತರ ಇವರಿಬ್ಬರ ಹಿಂದೆ ಗಾಸಿಪ್ ಪ್ರಿಯರು ಬಿದ್ದಿದ್ದಾರೆ. ಹಾಗಾಗಿ ಹೋದಲೆಲ್ಲಾ ಸಾಗರಿಕಾಗೆ ಜಹೀರ್ ಬಗ್ಗೆ ಪ್ರಶ್ನೆಗಳು ಎದುರಾಗುತ್ತಿವೆ. ಆದರೆ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಬಹಿರಂಗವಾಗಿ ಏನನ್ನೂ ಹೇಳಿಕೊಳ್ಳಲು ನಿರಾಕರಿಸಿದ್ದಾರೆ.
ಆದರೆ ಜಹೀರ್ ಖಾನ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಸಾಗರಿಕಾ ಅಭಿನಯಿಸುತ್ತಿರುವ ‘ಇರಾದೆ’ ಸಿನಿಮಾದ ಟ್ರೇಲರ್ ನನ್ನು ಹಾಡಿ ಹೊಗಳಿದ್ದಾರೆ. ಯಾವತ್ತೂ ಸಿನಿಮಾ ಬಗ್ಗೆ ಹೇಳಿಕೊಳ್ಳದ ಜಹೀರ್ ಈ ಸಿನಿಮಾದ ಬಗ್ಗೆ ಮಾತ್ರ ಪುಕ್ಕಟೆ ಪ್ರಚಾರ ಮಾಡುತ್ತಿರುವುದೇಕೆ ಎಂಬುದು ಗಾಸಿಪ್ ಪ್ರಿಯರ ಪ್ರಶ್ನೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ