ಜೊಹಾನ್ಸ್ ಬರ್ಗ್: ಟೀಂ ಇಂಡಿಯಾಕ್ಕೆ ರಾಹುಲ್ ದ್ರಾವಿಡ್ ನಂತರ ಬಂದ ಮತ್ತೊಬ್ಬ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಎಂದು ಹೇಳಲಾಗುತ್ತದೆ. ಆದರೆ ಅದು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ ತೃತೀಯ ಟೆಸ್ಟ್ ನಲ್ಲಿ ಅವರು ಎದುರಿಸಿದ ಬಾಲ್ ಗಳ ಸಂಖ್ಯೆ ನೋಡಿ ಸಂಪೂರ್ಣ ಸುಳ್ಳಲ್ಲ ಎನ್ನಬಹುದು.
ತೃತೀಯ ಟೆಸ್ಟ್ ನಲ್ಲಿ ಆರಂಭದಲ್ಲೇ ಕೆಎಲ್ ರಾಹುಲ್ ವಿಕೆಟ್ ಒಪ್ಪಿಸಿ ಹೊರ ನಡೆದಾಗ ಕ್ರೀಸ್ ಗೆ ಬಂದ ಪೂಜಾರ ತಾಳ್ಮೆಯ ಮೂರ್ತಿಯಂತೆ ಬ್ಯಾಟ್ ಮಾಡುತ್ತಿದ್ದರು. ಒಂದೊಂದು ಬಾಲ್ ನ್ನೂ ಅವರು ಎಷ್ಟು ನಾಜೂಕಾಗಿ ಎದುರಿಸಿದರೆಂದರೆ ಅಂತಿಮವಾಗಿ ಊಟದ ವಿರಾಮ ಬಂದಾಗ ಅವರ ಸ್ಕೋರ್ 5 ಆಗಿತ್ತು! ಅದಕ್ಕೆ ಅವರು ಎದುರಿಸಿದ ಬಾಲ್ ಗಳ ಸಂಖ್ಯೆ ಬರೋಬ್ಬರಿ 68!
ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಬಾಲ್ ಎದುರಿಸಿದ ದಾಖಲೆ ರಾಹುಲ್ ದ್ರಾವಿಡ್ ಹೆಸರಿನಲ್ಲಿದೆ. ಪೂಜಾರ ಕೂಡಾ ತಮಗೆ ದ್ರಾವಿಡ್ ರೋಲ್ ಮಾಡೆಲ್ ಅಂತಾರೆ. ಹೀಗೇ ಆಡಿ ಇನಿಂಗ್ಸ್ ಗಟ್ಟಿ ಮಾಡಿಕೊಂಡರಷ್ಟೇ ಭಾರತಕ್ಕೆ ಉಳಿಗಾಲ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ