ಮುಂಬೈ: ಪತ್ನಿಗೆ ಗೃಹ ಹಿಂಸೆ ನೀಡಿದ ಆರೋಪದಲ್ಲಿ ಕೋಲ್ಕೊತ್ತಾದ ಸ್ಥಳೀಯ ನ್ಯಾಯಾಲಯದಿಂದ ಬಂಧನ ವಾರೆಂಟ್ ಪಡೆದಿರುವ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪ್ರಕರಣದ ಬಗ್ಗೆ ಬಿಸಿಸಿಐ ಪ್ರತಿಕ್ರಿಯಿಸಿದೆ.
15 ದಿನಗಳೊಳಗಾಗಿ ಕೋರ್ಟ್ ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯ ಖಡಕ್ ಆದೇಶ ನೀಡಿದೆ. ಇದೀಗ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಶಮಿ ಪ್ರಕರಣದ ಬಗ್ಗೆ ಬಿಸಿಸಿಐ ತನ್ನ ನಿಲುವು ಸ್ಪಷ್ಟಪಡಿಸಿದೆ.
ಶಮಿ ವಿರುದ್ಧದ ಚಾರ್ಜ್ ಶೀಟ್ ಬರುವವರೆಗೂ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲ್ಲ. ಈಗಲೇ ನಿರ್ಧಾರಕ್ಕೆ ಬರುವುದು ಆತುರ ಮಾಡಿದಂತಾಗುತ್ತದೆ. ವೇಗಿ ವಿರುದ್ಧ ದಾಖಲಾದ ಆರೋಪಗಳು ನಿಜವೇ ಎಂದು ಸ್ಪಷ್ಟವಾಗಬೇಕಿದೆ. ಬಳಿಕವೇ ಶಿಸ್ತು ಕ್ರಮದ ಬಗ್ಗೆ ಚಿಂತಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.