ಮುಂಬೈ: ಈ ಸಾಲಿನ ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪ್ರಕಟವಾಗಿದ್ದು, ಕ್ರಿಕೆಟಿಗ ರೋಹಿತ್ ಶರ್ಮಾ ಐವರಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಗೌರವ ಲಭಿಸಿದೆ.
ರೋಹಿತ್ ಶರ್ಮಾ ಈ ಪ್ರಶಸ್ತಿ ಪಡೆದ ನಾಲ್ಕನೆಯ ಕ್ರಿಕೆಟ್ ಆಟಗಾರರಾಗಿದ್ದಾರೆ. ಉಳಿದಂತೆ ಪ್ಯಾರಾ ಅಥ್ಲಿಟ್ ಮಾರಿಯಪ್ಪನ್, ಟೇಬಲ್ ಟೆನಿಸ್ ಪಟು ಮಣಿಕಾ ಬಾತ್ರ, ಕುಸ್ತಿಪಟು ವಿನೇಶ್ ಮತ್ತು ಹಾಕಿ ಪಟು ರಾಣಿ ಕೂಡಾ ಖೇಲ್ ರತ್ನಕ್ಕೆ ಭಾಜನರಾಗಿದ್ದಾರೆ.
ಇನ್ನು, ಒಟ್ಟು ಎಂಟು ಮಂದಿಗೆ ದ್ರೋಣಾಚಾರ್ಯ ಪ್ರಶಸ್ತಿ ಲಭ್ಯವಾಗಿದೆ. ಇವರಲ್ಲಿ ಕ್ರಿಕೆಟ್ ಲೋಕದವರು ಯಾರೂ ಇಲ್ಲ. ಒಟ್ಟು 27 ಮಂದಿಗೆ ಅರ್ಜುನ ಪ್ರಶಸ್ತಿ ಲಭಿಸಿದ್ದು, ಇವರಲ್ಲಿ ಪ್ರಮುಖವಾಗಿ ಕ್ರಿಕೆಟಿಗ ಇಶಾಂತ್ ಶರ್ಮಾ, ದ್ಯುತಿ ಚಾಂದ್, ಅತಣು ದಾಸ್, ಮಹಿಳಾ ಕ್ರಿಕೆಟಿಗೆ ದೀಪ್ತಿ ಶರ್ಮಾ ಮುಂತಾದವರು ಸೇರಿದ್ದಾರೆ. ಉಳಿದಂತೆ 15 ಕ್ರೀಡಾಳುಗಳಿಗೆ ಧ್ಯಾನ್ ಚಂದ್ ಪ್ರಶಸ್ತಿ ನೀಡಲಾಗಿದೆ.