ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟಿಗರು ಇದೀಗ ಮಾಡಲು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಅದು ಹೇಗೆ ಸಾಧ್ಯ ಅಂತೀರಾ? ಈ ಸುದ್ದಿ ಓದಿ.
ಆಸ್ಟ್ರೇಲಿಯಾದ 230 ಕ್ರಿಕೆಟಿಗರು ನಿರುದ್ಯೋಗಿಗಳಾಗಿದ್ದಾರೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಕಾರಣ ಹೊಸದಾಗಿ ಅಲ್ಲಿನ ಕ್ರಿಕೆಟ್ ಮಂಡಳಿ ತಂದಿರುವ ಗುತ್ತಿಗೆ ಪದ್ಧತಿ. ಹೊಸ ಗುತ್ತಿಗೆಯನ್ನು ಕ್ರಿಕೆಟಿಗರು ಒಪ್ಪುತ್ತಿಲ್ಲ.
ಇದರಿಂದ ಅಲ್ಲಿನ ಕ್ರಿಕೆಟಿಗರು ನಿರುದ್ಯೋಗಿಗಳಾಗಿ ಕೂರುವ ಪರಿಸ್ಥತಿ ಎದುರಾಗಿದೆ. ಒಂಥರಾ ಅತಂತ್ರ ಸ್ಥಿತಿ ಅಲ್ಲಿ ನಿರ್ಮಾಣವಾಗಿದೆ. ಇದೀಗ ಭಾನುವಾರ ಈ ಪರಿಸ್ಥಿತಿಗೆ ಒಂದು ವಿರಾಮ ಸಿಗುವ ಸಾಧ್ಯತೆಯಿದೆ. ರಾಷ್ಟ್ರೀಯ ತಂಡದ ಆಟಗಾರರು ಈ ರೀತಿ ಹಠ ಹಿಡಿದು ಕುಳಿತಿರುವುದರಿಂದ ಆಷಸ್ ಆಡಲು ದ್ವಿತೀಯ ದರ್ಜೆ ತಂಡವನ್ನು ಕಳುಹಿಸಬೇಕಾದ ಅನಿವಾರ್ಯತೆ ಎದುರಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ