Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ನವದೆಹಲಿ: ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ತನ್ನ ಸ್ನೇಹಿತರನ್ನೇ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆ ಮಾಡಿದ ಆರೋಪ ಸ್ಮಿತ್ ಮೇಲೆ ಮಾಡಲಾಗಿದೆ.
ಆಸೀಸ್ ನ ಮಾಜಿ ವೇಗಿ ರಾಡ್ನಿ ಹಾಗ್ ಸ್ಮಿತ್ ಮೇಲೆ ಆರೋಪ ಹೊರಿಸಿದ್ದಾರೆ. ‘ಸ್ಮಿತ್ ತಮ್ಮ ಕೆಲವು ಸ್ನೇಹಿತರನ್ನೇ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುತ್ತಿದ್ದಾರೆ. ಅಶ್ತೋನ್ ಅಗರ್, ಮ್ಯಾಡಿನ್ಸನ್ ಮುಂತಾದವರು ಸ್ಮಿತ್ ಜತೆ ನಿಕಟವಾಗಿರುವುದಕ್ಕೆ ಆಯ್ಕೆಯಾಗುತ್ತಿದ್ದಾರೆ. ಕೆಲವು ಪ್ರತಿಭಾವಂತರು ಆಯ್ಕೆಯಾಗುತ್ತಿಲ್ಲ’ ಎಂದು ಹಾಗ್ ದೂರಿದ್ದಾರೆ.
ಸ್ಮಿತ್ ಆಯ್ಕೆಗಾರನ ಪಾತ್ರ ಮಾಡಬಾರದು. ಅವರು ಕೇವಲ ನಾಯಕನಾಗಿದ್ದರೆ ಸಾಕು ಎಂದು ಅವರು ಖಡಕ್ ಆಗಿ ಹೇಳಿದ್ದಾರೆ. ಭಾರತದ ವಿರುದ್ಧ ಸೋತು ಸುಣ್ಣವಾಗಿರುವ ಆಸೀಸ್ ನಾಯಕನನ್ನು ಟೀಕಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ