Publish Date: Thu, 23 Jan 2020 (08:56 IST)
Updated Date: Thu, 23 Jan 2020 (08:57 IST)
ನವದೆಹಲಿ: ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತನ್ನ ಉದಾಹರಣೆ ನೀಡಿ ಸ್ಪೂರ್ತಿ ತುಂಬಿದ್ದಕ್ಕೆ ಕ್ರಿಕೆಟಿಗ ಅನಿಲ್ ಕುಂಬ್ಳೆ ಧನ್ಯವಾದ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಬಗೆಗಿನ ಭಯ ಹೋಗಲಾಡಿಸಲು ಪ್ರಧಾನಿ ಮೋದಿ ‘ಪರೀಕ್ಷಾ ಪೇ ಚರ್ಚಾ’ ಎಂಬ ಸಂವಾದ ಕಾರ್ಯಕ್ರಮ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್-ಅನಿಲ್ ಕುಂಬ್ಳೆ ಅವರ 2001 ರ ಕೋಲ್ಕೊತ್ತಾ ಟೆಸ್ಟ್ ನ ಮ್ಯಾರಥಾನ್ ಇನಿಂಗ್ಸ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ದವಡೆ ಮುರಿದರೂ ಬ್ಯಾಂಡೇಜ್ ಹಾಕಿಕೊಂಡು ಬೌಲಿಂಗ್ ಮಾಡಿದ್ದ ಅನಿಲ್ ಕುಂಬ್ಳೆಯನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವಂತೆ ಮೋದಿ ಸಲಹೆ ನೀಡಿದ್ದರು.
ಸಂವಾದ ಕಾರ್ಯಕ್ರಮದಲ್ಲಿ ತಮ್ಮನ್ನು ಉದಾಹರಣೆಯಾಗಿ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿರುವ ಅನಿಲ್ ಕುಂಬ್ಳೆ ಇದರಿಂದ ನನಗೆ ಗೌರವ ಸಿಕ್ಕಂತಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಗೂ ಆಲ್ ದಿ ಬೆಸ್ಟ್ ಹೇಳಿದ್ದಾರೆ.