ದುಬೈ: ಐಸಿಸಿಯ ತಾಂತ್ರಿಕ ಸಮಿತಿಗೆ ಮತ್ತೆ ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಮುಖ್ಯಸ್ಥರಾಗಿ ಪುನರಾಯ್ಕೆಗೊಂಡಿದ್ದಾರೆ.
ಈ ಮೂಲಕ ಸತತ ಮೂರನೇ ಬಾರಿಗೆ ಅನಿಲ್ ಕುಂಬ್ಳೆಗೆ ತಾಂತ್ರಿಕ ಸಮಿತಿಯ ಹೊಣೆ ನೀಡಲಾಗಿದೆ. 2012 ರಿಂದ ಅನಿಲ್ ಕುಂಬ್ಳೆ ಐಸಿಸಿ ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಕ್ರಿಕೆಟ್ ನ ನಿಯಮಗಳಲ್ಲಿ ಪರಿಷ್ಕರಣೆ, ಹೊಸ ನಿಯಮ ರೂಪಿಸುವುದು ಇತ್ಯಾದಿ ಈ ತಾಂತ್ರಿಕ ಸಮಿತಿಯ ಮುಖ್ಯ ಕೆಲಸವಾಗಿದೆ.
ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಐಸಿಸಿಯ ಒಂದು ಸಮಿತಿಯಲ್ಲಿ ಮೂರಕ್ಕಿಂತ ಹೆಚ್ಚು ಬಾರಿ ಮುಖ್ಯಸ್ಥರಾಗಿ ಮುಂದುವರಿಯುವಂತಿಲ್ಲ. ಹಾಗಾಗಿ ಇದುವೇ ಅನಿಲ್ ಕುಂಬ್ಳೆಯ ಕೊನೆಯ ಅಧಿಕಾರಾವಧಿಯಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.