ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧದ ಪ್ರಥಮ ಟೆಸ್ಟ್ ನಿಂದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ರನ್ನು ಹೊರಗಿಟ್ಟಿದ್ದಕ್ಕೆ ಸುನಿಲ್ ಗವಾಸ್ಕರ್ ಸೇರಿದಂತೆ ಕ್ರಿಕೆಟ್ ಪ್ರಿಯರು ಟೀಕಿಸಿದ್ದಾರೆ. ಈ ಬಗ್ಗೆ ಅಜಿಂಕ್ಯಾ ರೆಹಾನೆ ಕಾರಣ ವಿವರಿಸಿದ್ದಾರೆ.
ಹಿರಿಯ ಸ್ಪಿನ್ನರ್ ಗೆ ಅವಕಾಶ ನೀಡದಿರುವುದು ಅಚ್ಚರಿಯ ಸಂಗತಿ ಎಂದು ಸುನಿಲ್ ಗವಾಸ್ಕರ್ ಟೀಕಿಸಿದ್ದರೆ, ರೆಹಾನೆ ಇದರ ಹಿಂದೆ ಕೋಚ್ ಮತ್ತು ನಾಯಕನ ಲೆಕ್ಕಾಚಾರವೇನೆಂದು ಹೇಳಿದ್ದಾರೆ.
‘ಅಶ್ವಿನ್, ರೋಹಿತ್ ಶರ್ಮಾರಂತಹ ಪ್ರತಿಭಾವಂತ ಕ್ರಿಕೆಟಿಗರನ್ನು ಹೊರಗಿಡುವಾಗ ತಂಡದ ಮ್ಯಾನೇಜ್ ಮೆಂಟ್ ಸರಿಯಾಗಿ ಆಲೋಚನೆ ಮಾಡುತ್ತದೆ. ಈ ವಿಕೆಟ್ ಗೆ ಅಶ್ವಿನ್ ಗಿಂತ ಜಡೇಜಾ ಉತ್ತಮ ಎನಿಸಿತು. ಜಡೇಜಾ ಬ್ಯಾಟಿಂಗ್ ಗೂ ಉಪಯೋಗಕ್ಕೆ ಬರುತ್ತಾರೆ. ಅದೇ ಕಾರಣಕ್ಕೆ ಕೋಚ್ ಮತ್ತು ನಾಯಕ ಈ ನಿರ್ಧಾರಕ್ಕೆ ಬಂದರು’ ಎಂದು ರೆಹಾನೆ ಕಾರಣ ವಿವರಿಸಿದ್ದಾರೆ.