ನ್ಯೂಯಾರ್ಕ್: ದೂರದ ಅಮೆರಿಕಾದಲ್ಲೂ ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ ಎಂದರೆ ಎಷ್ಟು ಗೌರವವಿದೆ ಎನ್ನುವುದಕ್ಕೆ ಇದುವೇ ಸಾಕ್ಷಿ. ಅಮೆರಿಕಾದಲ್ಲಿ ಕ್ರಿಕೆಟ್ ಮೈದಾನವೊಂದಕ್ಕೆ ಸುನಿಲ್ ಗವಾಸ್ಕರ್ ಹೆಸರು ಇಡಲಾಗುತ್ತಿದೆ.
ವಿಪರ್ಯಾಸವೆಂದರೆ ಭಾರತದಲ್ಲೂ ಯಾವುದೇ ಸ್ಟೇಡಿಯಂಗೆ ಕ್ರಿಕೆಟಿಗರ ಹೆಸರಿಲ್ಲ. ಕೇವಲ ಮೈದಾನದ ಸ್ಟ್ಯಾಂಡ್ ಗೆ ಆಯಾ ರಾಜ್ಯದಿಂದ ಬಂದ ದಿಗ್ಗಜ ಕ್ರಿಕೆಟಿಗರ ಹೆಸರಿಡಲಾಗುತ್ತದೆಯಷ್ಟೇ. ಆದರೆ ಅಮೆರಿಕಾ ಮಾತ್ರ ಭಾರತೀಯ ಕ್ರಿಕೆಟಿಗನ ಮೇಲಿನ ತನ್ನ ಗೌರವವನ್ನು ಈ ಪರಿಯಾಗಿ ತೋರಿಸಿದೆ.
ಅಮೆರಿಕಾದಲ್ಲಿ ಕ್ರಿಕೆಟ್ ಅಷ್ಟೊಂದು ಜನಪ್ರಿಯವಲ್ಲ. ಹಾಗಿದ್ದರೂ ಸುನಿಲ್ ಗವಾಸ್ಕರ್ ಫೀಲ್ಡ್ ಎಂಬ ಹೆಸರಿನಲ್ಲಿ ಕ್ರಿಕೆಟ್ ಮೈದಾನವೊಂದು ಉದ್ಘಾಟನೆಯಾಗಲಿರುವುದು ಭಾರತಕ್ಕೆ ನಿಜಕ್ಕೂ ಗೌರವದ ವಿಷಯ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ