Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ದಿ ಓವಲ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಎರಡನೇ ಇನಿಂಗ್ಸ್ ವೇಳೆ ಆಸೀಸ್ ಬ್ಯಾಟಿಗ ಲಬುಶೇನ್ ಕೂತಲ್ಲಿಯೇ ನಿದ್ರೆ ಹೋಗಿ ಟ್ರೋಲ್ ಗೊಳಗಾಗಿದ್ದಾರೆ.
ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಆಸೀಸ್ ಗೆ ಡೇವಿಡ್ ವಾರ್ನರ್ ಬೇಗನೇ ವಿಕೆಟ್ ಒಪ್ಪಿಸುವ ಮೂಲಕ ಆಘಾತವಿಕ್ಕಿದರು. ಆದರೆ ಈ ವೇಳೆ ಆಸೀಸ್ ನ ಮೂರನೇ ಕ್ರಮಾಂಕದ ಬ್ಯಾಟಿಗ ಲಬುಶೇನ್ ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್ ಗೆ ಸಿದ್ದವಾಗಿದ್ದವರು ಪೆವಿಲಿಯನ್ ನಲ್ಲಿ ಕೂತು ನಿದ್ರೆ ಹೋಗಿದ್ದರು.
ವಾರ್ನರ್ ಔಟಾದ ಬಳಿಕ ನಿದ್ರೆಯಿಂದ ಎಚ್ಚರವಾದ ಅವರು ತನ್ನ ಸರದಿ ಎಂದು ತಿಳಿಯುತ್ತಿದ್ದಂತೇ ತಡಬಡಾಯಿಸಿಕೊಂಡು ಮೈದಾನಕ್ಕಿಳಿದರು. ಬಳಿಕ ಮೊಹಮ್ಮದ್ ಸಿರಾಜ್ ಬೌಲಿಂಗ್ ನಲ್ಲಿ ಒಮ್ಮೆ ಜಾರಿ ಬಿದ್ದರೆ, ಮತ್ತೊಮ್ಮೆ ಕೈಗೆ ಏಟು ಮಾಡಿಕೊಂಡರು. ಹೀಗಾಗಿ ಅವರು ಟ್ವಿಟರ್ ನಲ್ಲಿ ಟ್ರೋಲ್ ಗೊಳಗಾಗಿದ್ದಾರೆ. ಬಹುಶಃ ನಿದ್ರೆಯ ಮಂಪರು ಇಳಿದಿರಲಿಲ್ಲವೇನೋ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ.