ಲಂಡನ್: ಇಂಗ್ಲೆಂಡ್ ವಿರುದ್ಧ 2019 ರ ವಿಶ್ವಕಪ್ ಫೈನಲ್ ನಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ 12 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ನಿಧಾನಗತಿಯ ಬ್ಯಾಟಿಂಗ್ ನಡೆಸುತ್ತಿದೆ. ಇತ್ತೀಚೆಗಿನ ವರದಿ ಬಂದಾಗ 27 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿದೆ.
ಈ ನಡುವೆ ಹೆನ್ರಿ ನಿಕಲಸ್ 55 ರನ್ ಗಳಿಸಿದರೆ ನಾಯಕ ಕೇನ್ ವಿಲಿಯಮ್ಸನ್ 30 ರನ್ ಗಳಿಸಿದರು. ಇಂದು ಒಂದು ರನ್ ಗಳಿಸುವುದರೊಂದಿಗೆ ಅವರು ಒಂದೇ ವಿಶ್ವಕಪ್ ನಲ್ಲಿ ಅತ್ಯಧಿಕ ರನ್ ಗಳಿಸಿದ ನಾಯಕ ಎಂಬ ಖ್ಯಾತಿಗೆ ಪಾತ್ರರಾದರು. ಇದೀಗ ಈ ಕೂಟದಲ್ಲಿ ಅವರು ಗಳಿಸಿದ ರನ್ ಸಂಖ್ಯೆ 579 ಆಗಿದೆ. ಈ ಮೂಲಕ ಶ್ರೀಲಂಕಾ ಮಾಜಿ ನಾಯಕ ಕುಮಾರ್ ಸಂಗಕ್ಕಾರ 12 ವರ್ಷಗಳ ಹಿಂದೆ ಮಾಡಿದ್ದ 548 ರನ್ ಗಳ ದಾಖಲೆ ಮುರಿದಿದ್ದಾರೆ.