Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿಶ್ವಕಪ್ ಕ್ರಿಕೆಟ್ 2019: ಮೊದಲ ಬಾರಿಗೆ ಚಾಂಪಿಯನ್ ಆಗುವ ತವಕದಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್

ವಿಶ್ವಕಪ್ ಕ್ರಿಕೆಟ್ 2019: ಮೊದಲ ಬಾರಿಗೆ ಚಾಂಪಿಯನ್ ಆಗುವ ತವಕದಲ್ಲಿ ಇಂಗ್ಲೆಂಡ್-ನ್ಯೂಜಿಲೆಂಡ್
ಲಂಡನ್ , ಭಾನುವಾರ, 14 ಜುಲೈ 2019 (09:12 IST)
ಲಂಡನ್: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಇಂದು ವಿಶ್ವಕಪ್ ಕ್ರಿಕೆಟ್ 2019 ರ ಫೈನಲ್ ಪಂದ್ಯ ನಡೆಯಲಿದ್ದು, ಅತಿಥೇಯ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಪಂದ್ಯ ನಡೆಯಲಿದೆ.


ವಿಶೇಷವೆಂದರೆ ಎರಡೂ ತಂಡಗಳು ಇದುವರೆಗೆ ಫೈನಲ್ ಗೆದ್ದಿಲ್ಲ. ಹೀಗಾಗಿ ಇಂದು ಯಾರೇ ಗೆದ್ದರೂ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಸಂಭ್ರಮ ಆಚರಿಸಲಿದ್ದಾರೆ.

ಕ್ರಿಕೆಟ್ ಜನಕ ಎಂದೇ ಕರೆಯಿಸಿಕೊಳ್ಳುವ ಇಂಗ್ಲೆಂಡ್ ಇದು ನಾಲ್ಕನೇ ಬಾರಿ ಫೈನಲ್ ಗೆ ತಲುಪಿದೆ. ಈ ಮೊದಲು ಮೂರೂ ಬಾರಿ ರನ್ನರ್ ಅಪ್ ಆಗಿತ್ತು. ನ್ಯೂಜಿಲೆಂಡ್ ಕಳೆದ ಬಾರಿ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್ ಆಡಿ ಸೋತಿತ್ತು. ಹೀಗಾಗಿ ಮತ್ತೆ ಇಂದು ಗೆಲ್ಲಲೇಬೇಕು ಎಂಬ ಹಠದಲ್ಲಿದೆ.

ಆದರೆ ಮೇಲ್ನೋಟಕ್ಕೆ ನೋಡಿದರೆ ಅತಿಥೇಯ ಇಂಗ್ಲೆಂಡ್ ಬ್ಯಾಟಿಂಗ್, ಬೌಲಿಂಗ್ ನಲ್ಲಿ ಪ್ರಬಲವಾಗಿದೆ. ನ್ಯೂಜಿಲೆಂಡ್ ಗೆ ನಾಯಕ ಕೇನ್ ವಿಲಿಯಮ್ಸ್ ರಷ್ಟು ಫಾರ್ಮ್ ನಲ್ಲಿರುವ ಬ್ಯಾಟ್ಸ್ ಮನ್ ಇಲ್ಲ. ರಾಸ್ ಟೇಲರ್ ತಮ್ಮ ಅನುಭವಕ್ಕೆ ತಕ್ಕ ಆಟವಾಡಬೇಕಿದೆ. ಕೀವೀಸ್ ಗೆ ಬೌಲಿಂಗೇ ಶಕ್ತಿ. ಹೀಗಾಗಿ ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಮೇಲಾ? ಕೀವೀಸ್ ಬೌಲಿಂಗಾ? ಎನ್ನುವುದೇ ಕದನ ಕುತೂಹಲ. ಪಂದ್ಯ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೀಂ ಇಂಡಿಯಾ ಇಬ್ಬಾಗ! ರೋಹಿತ್-ಕೊಹ್ಲಿ ಬಳಗದ ಒಳಗೇ ನಡೀತಿದೆ ವಾರ್!