ಚೆನ್ನೈ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಸೋತ ಟೀಂ ಇಂಡಿಯಾಗೆ ಈಗ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಮುಂದಿನ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆ ಎದುರಾಗಿದೆ.
ಒಂದು ವೇಳೆ ಭಾರತ ಈ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾದರೆ ಈ ಮೂರು ಬದಲಾವಣೆ ಮಾಡಿದರೆ ಉತ್ತಮ. ಅದರಲ್ಲಿ ಪ್ರಮುಖವಾದುದು, ಕುಲದೀಪ್ ಯಾದವ್ ಸೇರ್ಪಡೆ. ಕಳೆದ ಪಂದ್ಯದಲ್ಲಿ ಶಹಬಾಜ್ ನದೀಂ ಹೆಚ್ಚು ಪರಿಣಾಮಕಾರಿ ಎನಿಸಲಿಲ್ಲ. ಅಲ್ಲದೆ, ಕುಲದೀಪ್ ರನ್ನು ಹೊರಗಿಟ್ಟು ಟೀಂ ಇಂಡಿಯಾ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಹೀಗಾಗಿ ಕುಲದೀಪ್ ತಂಡಕ್ಕೆ ಸೇರ್ಪಡೆಯಾಗುವ ಸಾಧ‍್ಯತೆಯಿದೆ.
ಇನ್ನು, ಹಿಟ್ ಮ್ಯಾನ್ ರೋಹಿತ್ ಶರ್ಮಾ ಯಾಕೋ ಖ್ಯಾತಿಗೆ ತಕ್ಕ ಬ್ಯಾಟಿಂಗ್ ಮಾಡುತ್ತಿಲ್ಲ. ಅವರ ಬದಲು ಕನ್ನಡಿಗ ಕೆಎಲ್ ರಾಹುಲ್ ರನ್ನು ಕರೆತರಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ ಈ ಬದಲಾವಣೆ ಮಾಡುವುದು ಅನುಮಾನ. ಇನ್ನೊಬ್ಬರೆಂದರೆ ಅಜಿಂಕ್ಯಾ ರೆಹಾನೆ ಕೂಡಾ ಕೈಕೊಟ್ಟಿದ್ದಾರೆ. ಹೀಗಾಗಿ ಅವರ ಬದಲು ಮಯಾಂಕ್ ಅಗರ್ವಾಲ್ ಗೆ ಒಂದು ಅವಕಾಶ ನೀಡಬೇಕು ಎಂದು ಒತ್ತಾಯ ಕೇಳಿಬರುತ್ತಿದೆ. ಆದರೆ ಕೊಹ್ಲಿ ಈ ಬದಲಾವಣೆ ಮಾಡುವ ಸಾಧ‍್ಯತೆ ಕಡಿಮೆ. ಯಾಕೆಂದರೆ ಶೂನ್ಯಕ್ಕೆ ಔಟಾದರೂ ರೆಹಾನೆ ಪರ ಕೊಹ್ಲಿ ಕಳೆದ ಪಂದ್ಯದ ಬಳಿಕ ಬ್ಯಾಟಿಂಗ್ ಮಾಡಿದ್ದರು.