ದುಬೈ: ಬಹಳ ದಿನಗಳ ನಂತರ ಟೀಂ ಇಂಡಿಯಾಕ್ಕೆ ವಾಪಸಾದ ಕೆಎಲ್ ರಾಹುಲ್ ಬ್ಯಾಟ್ ಮೊದಲಿನಂತೆ ಸದ್ದು ಮಾಡ್ತಿಲ್ಲ. ಜಿಂಬಾಬ್ವೆ ಸರಣಿಯಲ್ಲೂ ಅವರು ಹೇಳಿಕೊಳ್ಳುವಂತಹ ಇನಿಂಗ್ಸ್ ಆಡಿಲ್ಲ. ಇದೀಗ ಏಷ್ಯಾ ಕಪ್ ನಲ್ಲೂ ಮೊದಲ ಪಂದ್ಯದಲ್ಲಿ ವಿಫಲರಾದರೆ, ಎರಡನೇ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿ ಟೀಕೆಗೊಳಗಾಗಿದ್ದಾರೆ.
ಆರಂಭಿಕ ಬ್ಯಾಟಿಗರೇ ನಿಧಾನಗತಿಯಲ್ಲಿ ರನ್ ಮಾಡುವುದರಿಂದ ತಂಡದ ರನ್ ಗತಿಗೆ ಕಡಿವಾಣ ಬೀಳುತ್ತದೆ. ಕೆಳ ಕ್ರಮಾಂಕದ ಬ್ಯಾಟಿಗರ ಮೇಲೆ ಒತ್ತಡ ಬೀರುತ್ತಿದೆ. ಹೀಗಾಗಿ ಕೆಎಲ್ ರಾಹುಲ್ ರನ್ನು ಕೈಬಿಟ್ಟು ರಿಷಬ್ ಪಂತ್ ಗೆ ಅವಕಾಶ ಕೊಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಆದರೆ ರೋಹಿತ್ ಮತ್ತು ದ್ರಾವಿಡ್ ರಾಹುಲ್ ರನ್ನು ಹೊರಗಿಡುವ ಧೈರ್ಯ ಮಾಡ್ತಾರಾ ನೋಡಬೇಕು. ಒಂದು ವೇಳೆ ರಾಹುಲ್ ಹೊರಹೋದರೆ ರೋಹಿತ್-ಕೊಹ್ಲಿ ಆರಂಭಿಕರಾಗಿ ಸೂರ್ಯಕುಮಾರ್ ಮೂರನೇ ಕ್ರಮಾಂಕದಲ್ಲಿ ಆಡಬಹುದು. ಆಗ ರಿಷಬ್ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು.