Publish Date: Wed, 28 Sep 2022 (09:50 IST)
Updated Date: Wed, 28 Sep 2022 (09:59 IST)
ತಿರುವನಂತಪುರಂ: ಭಾರತ ಮತ್ತು ದ.ಆಫ್ರಿಕಾ ನಡುವೆ ಇಂದಿನಿಂದ ಟಿ20 ಸರಣಿ ಆರಂಭವಾಗುತ್ತಿದ್ದು, ಟೀಂ ಇಂಡಿಯಾ ಆರಂಭಿಕರ ಬಗ್ಗೆ ಚರ್ಚೆ ಜೋರಾಗಿದೆ.
ಇದಕ್ಕೆ ಕಾರಣವಾಗಿದ್ದು ರೋಹಿತ್ ಶರ್ಮಾ ನೀಡಿರುವ ಹೇಳಿಕೆ. ಮುಂಬರುವ ವಿಶ್ವಕಪ್ ನಲ್ಲಿ ನನ್ನ ಜೊತೆಗೆ ಕೊಹ್ಲಿ ಓಪನಿಂಗ್ ಮಾಡಬಹುದು ಎಂದು ರೋಹಿತ್ ಸುಳಿವು ನೀಡಿದ್ದಾರೆ.
ಹೀಗಾಗಿ ಇದರ ಪ್ರಯೋಗಾರ್ಥವಾಗಿ ಇಂದಿನಿಂದ ಆರಂಭವಾಗಲಿರುವ ಟಿ20 ಸರಣಿಯಲ್ಲಿ ಕೊಹ್ಲಿಯೇ ರೋಹಿತ್ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯಬಹುದು ಎನ್ನಲಾಗುತ್ತಿದೆ. ಕೆಎಲ್ ರಾಹುಲ್ ಫಾರ್ಮ್ ಕೊರತೆ ಅನುಭವಿಸುತ್ತಿದ್ದು, ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿದರೆ ರಾಹುಲ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ‍್ಯತೆಯಿದೆ.