ಕೇಪ್ ಟೌನ್: ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವಿರುದ್ಧ ಟೀಕೆಗಳ ಸುರಿಮಳೆಯಾಗಿದೆ.
ಟೀಂ ಇಂಡಿಯಾ ತಂಡವಾಗಿ ಕಳಪೆ ಪ್ರದರ್ಶನ ನೀಡಿದ್ದು ಮಾತ್ರವಲ್ಲ, ನಾಯಕ ರೋಹಿತ್ ಶರ್ಮಾ ಕೂಡಾ ಎರಡೂ ಇನಿಂಗ್ಸ್ ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಅದರಲ್ಲೂ ವಿದೇಶದಲ್ಲಿ ಇತ್ತೀಚೆಗೆ ರೋಹಿತ್ ರನ್ ಗಳಿಕೆ ದಾಖಲೆಯೂ ಉತ್ತಮವಾಗಿಲ್ಲ.
ಈ ಕಾರಣಕ್ಕೆ ರೋಹಿತ್ ಶರ್ಮಾ ವಿರುದ್ಧ ಮಾಜಿ ಕ್ರಿಕೆಟಿಗ ಸುಬ್ರಮಣಿಯನ್ ಬದರಿನಾಥ್ ಟೀಕಾ ಪ್ರಹಾರ ನಡೆಸಿದ್ದಾರೆ. ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ತಂಡದಲ್ಲಿರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಟೆಸ್ಟ್ ತಂಢದ ನಾಯಕರಾಗಿದ್ದಾರೆ ಎಂದು ಬದರಿನಾಥ್ ಟೀಕಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ನಾಯಕನಾಗಿ ಕೊಹ್ಲಿ ದಾಖಲೆ ಉತ್ತಮವಾಗಿದೆ. ನಾಯಕನಾಗಿ 5000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.68 ಟೆಸ್ಟ್ ಗಳಿಂದ 47 ಗೆಲುವು ಸಂಪಾದಿಸಿದ್ದಾರೆ. ಅತ್ಯಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದ ನಾಯಕ ಎಂಬ ದಾಖಲೆ ಅವರದ್ದು. ಹಾಗಿರುವಾಗ ವಿರಾಟ್ ಯಾಕೆ ಟೆಸ್ಟ್ ತಂಡದ ನಾಯಕನಾಗಿಲ್ಲ? ಕೊಹ್ಲಿ ಮತ್ತು ರೋಹಿತ್ ನಡುವೆ ಹೋಲಿಕೆಯೇ ಇಲ್ಲ. ಟೆಸ್ಟ್ ತಂಡದ ಆರಂಭಿಕರಾಗಿ ರೋಹಿತ್ ಇದುವರೆಗೆ ಏನೂ ಸಾಧಿಸಿಲ್ಲ. ಅಂತಹವರು ಯಾಕೆ ನಾಯಕರಾಗಿದ್ದಾರೆ? ಎಂದು ಬದರಿನಾಥ್ ಪ್ರಶ್ನಿಸಿದ್ದಾರೆ.