Select Your Language

Notifications

webdunia
webdunia
webdunia
webdunia

ರೋಹಿತ್ ಶರ್ಮಾ ಬದಲು ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ನಾಯಕರಾಗಬಲ್ಲ ಆಟಗಾರರು

ರೋಹಿತ್ ಶರ್ಮಾ ಬದಲು ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ನಾಯಕರಾಗಬಲ್ಲ ಆಟಗಾರರು
ಮುಂಬೈ , ಶನಿವಾರ, 17 ಜೂನ್ 2023 (09:00 IST)
ಮುಂಬೈ: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಸೋಲಿನ ಬಳಿಕ ಟೆಸ್ಟ್ ತಂಡದ ನಾಯಕತ್ವದಿಂದ ರೋಹಿತ್ ಶರ್ಮಾರನ್ನು ಬದಲಾಯಿಸಬೇಕು ಎಂಬ ಕೂಗು ಕೇಳಿಬಂದಿತ್ತು. ರೋಹಿತ್ ಬದಲಿಗೆ ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕತ್ವ ವಹಿಸಬಲ್ಲ ಆಟಗಾರರು ಯಾರಾಗಬಹುದು ನೋಡೋಣ.

ಅಜಿಂಕ್ಯಾ ರೆಹಾನೆ: ಸಂಕಷ್ಟದ ಸಮಯದಲ್ಲಿ ಭಾರತ ತಂಡವನ್ನು ಟೆಸ್ಟ್ ತಂಡಗಳಲ್ಲಿ ಯಶಸ್ವಿಯಾಗಿ ಮುನ್ನಡೆಸಿದ ಅನುಭವಿ. ಫಾರ್ಮ್ ಕೊರತೆಯಿಂದ ತಂಡದಿಂದ ಹೊರಗಿದ್ದರೂ ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ವಿದೇಶಗಳಲ್ಲಿ ಅತ್ಯುತ್ತಮವಾಗಿ ಆಡುವ ರೆಹಾನೆ ತಾಳ್ಮೆಯಿಂದ ತಂಡ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.
ಜಸ್ಪ್ರೀತ್ ಬುಮ್ರಾ: ವೇಗದ ಬೌಲರ್ ಗಳು ತಂಡವನ್ನು ಮುನ್ನಡೆಸಿರುವುದು ಕಡಿಮೆ. ಆದರೆ ಜಸ್ಪ್ರೀತ್ ಬುಮ್ರಾ ಒಂದು ಪಂದ್ಯಕ್ಕೆ ಭಾರತ ತಂಡದ ನಾಯಕತ್ವ ವಹಿಸಿ ಕಪಿಲ್ ದೇವ್ ಬಳಿಕ ಈ ಸಾಧನೆ ಮಾಡಿದ ಹಿರಿಮೆಗೆ ಪಾತ್ರರಾಗಿದ್ದರು. ಗಾಯದಿಂದ ಚೇತರಿಸಿಕೊಂಡು ವಾಪಸ್ ಬಂದರೆ ಅವರೂ ನಾಯಕ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯಾಗಬಹುದು.
ರಿಷಬ್ ಪಂತ್: ಸದ್ಯಕ್ಕೆ ಗಾಯಗೊಂಡಿರುವ ವಿಕೆಟ್ ಕೀಪರ್ ಬ್ಯಾಟಿಗ ಟೀಂ ಇಂಡಿಯಾದ ದೀರ್ಘ ಕಾಲದ ಕ್ಯಾಪ್ಟನ್ ಸ್ಥಾನವನ್ನು ತುಂಬಬಲ್ಲರು. ಹೊಡೆಬಡಿಯ ಆಟದ ಶೈಲಿಯಾಗಿದ್ದರೂ ಟೆಸ್ಟ್ ಕ್ರಿಕೆಟ್ ನಲ್ಲಿ ರಿಷಬ್ ತಮ್ಮದೇ ಸ್ಥಾನ ಹೊಂದಿದ್ದಾರೆ. ಅವರ ಕೊರತೆ ತಂಡಕ್ಕೆ ಈಗ ಬಹುವಾಗಿ ಕಾಡುತ್ತಿದೆ. ಐಪಿಎಲ್ ನಲ್ಲಿ ನಾಯಕತ್ವದ ಅನುಭವವಿದೆ.
ಕೆಎಲ್ ರಾಹುಲ್: ರೋಹಿತ್ ಅನುಪಸ್ಥಿತಿಯಲ್ಲಿ ಟೆಸ್ಟ್ ತಂಡದ ನಾಯಕತ್ವ ವಹಿಸಿ ಯಶಸ್ವಿಯಾಗಿದ್ದಾರೆ. ರಾಹುಲ್ ಗೆ ಅನುಭವದ ಸಾಥ್ ಇದೆ. ಹೀಗಾಗಿ ಅವರು ನಾಯಕತ್ವಕ್ಕೆ ಪ್ರಬಲ ಅಭ್ಯರ್ಥಿಯಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಗುಡ್ ನ್ಯೂಸ್! ಏಷ್ಯಾ ಕಪ್ ಗೆ ಮರಳಲಿದ್ದಾರೆ ಸ್ಟಾರ್ ವೇಗಿ ಬುಮ್ರಾ, ಶ್ರೇಯಸ್ ಅಯ್ಯರ್