Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಹಾಲಿ ಎನ್ ಸಿಎ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್ ಕಾರ್ಯನಿರ್ವಹಿಸಲಿದ್ದಾರಂತೆ. ಹಾಗಿದ್ದರೆ ಹಾಲಿ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಕತೆಯೇನು?
ಜೂನ್ ಅಂತ್ಯಕ್ಕೆ ಟೀಂ ಇಂಡಿಯಾ ಐರ್ಲೆಂಡ್ ನಲ್ಲಿ ಟಿ20 ಸರಣಿ ಆಡಲು ತೆರಳಲಿದೆ. ಇದೇ ವೇಳೆ ಟೀಂ ಇಂಡಿಯಾದ ಇನ್ನೊಂದು ತಂಡ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ.
ಹೀಗಾಗಿ ಎರಡು ತಂಡಗಳಿಗೆ ಇಬ್ಬರು ಕೋಚ್ ಗಳು ಅನಿವಾರ್ಯ. ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಟೆಸ್ಟ್ ತಂಡದ ಜೊತೆಗಿರಲಿದ್ದಾರೆ. ಲಕ್ಷ್ಮಣ್ ಐರ್ಲೆಂಡ್ ಸರಣಿಗೆ ಮಾತ್ರ ಟೀಂ ಇಂಡಿಯಾದ ಕೋಚ್ ಆಗಿ ಕೆಲಸ ಮಾಡಲಿದ್ದಾರೆ. ಈ ಹಿಂದೆ ರವಿಶಾಸ್ತ್ರಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಕೋಚ್ ಆಗಿದ್ದಾಗ ದ್ರಾವಿಡ್ ಅದೇ ಸಂದರ್ಭದಲ್ಲಿ ಟೀಂ ಇಂಡಿಯಾದ ಮತ್ತೊಂದು ತಂಡದ ಜೊತೆಗೆ ಲಂಕಾ ಸರಣಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಈಗಲೂ ಅದೇ ರೀತಿ ನಡೆಯಲಿದೆ.