Webdunia - Bharat's app for daily news and videos

Install App

ವಿರಾಟ್ ಕೊಹ್ಲಿ ಪ್ರತೀ ಬಾರಿ ಕಾರು ಇಳಿದು ಹೋಗುವಾಗಲೂ ತಮ್ಮ ಡ್ರೈವರ್ ಗೆ ಹೀಗೆ ಮಾಡೋದು ಮರೆಯಲ್ಲ

Krishnaveni K
ಶನಿವಾರ, 24 ಆಗಸ್ಟ್ 2024 (10:32 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯ ವಿಶೇಷ ಸ್ವಭಾವವೊಂದು ಸೋಷಿಯಲ್ ಮೀಡಿಯಾ ಬಳಕೆದಾರರ ಗಮನ ಸೆಳೆಯುತ್ತಿದೆ. ಕೊಹ್ಲಿ ಎಲ್ಲೇ ಹೋಗುವುದಿದ್ದರೂ ಕಾರಿಳಿದ ಬಳಿಕ ತಮ್ಮ ಡ್ರೈವರ್ ಗೆ ಇದೊಂದು ಕೆಲಸ ಮಾಡಲು ಮರೆಯುವುದಿಲ್ಲ.

ವಿರಾಟ್ ಕೊಹ್ಲಿ ವಿಶ್ವದ ಜನಪ್ರಿಯ ಮತ್ತು ಶ್ರೀಮಂತ ಕ್ರೀಡಾಳುಗಳಲ್ಲಿ ಒಬ್ಬರು. ಅವರು ಎಲ್ಲೇ ಹೋಗುವುದಿದ್ದರೂ ಅದು ದೊಡ್ಡ ಸುದ್ದಿಯಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಕೊಹ್ಲಿ ಕಾಣಿಸಿಕೊಂಡರೆ ಅವರ ಫೋಟೋ, ವಿಡಿಯೋಗಳು ಎಲ್ಲೆಡೆ ವೈರಲ್ ಆಗುವುದು ಸಹಜ.

ಈ ನಡುವೆ ಅಭಿಮಾನಿಗಳು ಅವರ ಈ ಒಂದು ವರ್ತನೆಯನ್ನು ಗಮನಿಸಲೇಬೇಕು. ಕೊಹ್ಲಿ ವಿಮಾನ ನಿಲ್ದಾಣಗಳಿಗೆ ಬರುವಾಗ ಡ್ರೈವರ್ ಅವರ ಕಾರು ಚಲಾಯಿಸುತ್ತಾರೆ. ತಮ್ಮ ಚಾಲಕನಿಗೆ ಕೊಹ್ಲಿ ಎಷ್ಟು ಬೆಲೆ ಕೊಡುತ್ತಾರೆಂದರೆ ಪ್ರತೀ ಬಾರಿ ಕಾರಿಳಿದು ಹೋಗುವಾಗಲೂ ಅವರು ಎಷ್ಟೇ ಅರ್ಜೆಂಟ್ ನಲ್ಲಿದ್ದರೂ, ಕ್ಯಾಮರಾ ಮ್ಯಾನ್ ಗಳು ತಮ್ಮನ್ನು ಸುತ್ತುವರೆದರೂ ತಮ್ಮನ್ನು ಡ್ರಾಪ್ ಮಾಡಿದ ಡ್ರೈವರ್ ಗೆ ಥ್ಯಾಂಕ್ಸ್ ಹೇಳುವುದು ಮರೆಯುವುದಿಲ್ಲ.

ಕಾರಿನಿಂದ ಇಳಿದು ಹೋಗುವ ಮುನ್ನ ಡ್ರೈವರ್ ಗೆ ಬಾಯ್ ಮಾಡಿಯೇ ತೆರಳುತ್ತಾರೆ. ಇದು ಕೇವಲ ವಿಮಾನ ನಿಲ್ದಾಣಗಳಲ್ಲಿ ಮಾತ್ರವಲ್ಲ, ಎಲ್ಲೇ ಹೋದರೂ ಕೊಹ್ಲಿ ಈ ಒಂದು ಕೆಲಸ ಮಾಡುತ್ತಾರೆ. ತಮ್ಮನ್ನು ಸುರಕ್ಷಿತವಾಗಿ ತಲುಪಿಸಿದ ಚಾಲಕನನ್ನು ಕೊಹ್ಲಿ ಗೌರವದಿಂದ ಕಾಣುತ್ತಾರೆ ಎನ್ನುವುದಕ್ಕೆ ಇದೇ ನಿದರ್ಶನ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಜೀವಬೆದರಿಕೆ ಬೆನ್ನಲ್ಲೇ ತಿರುಪತಿಗೆ ಟೀ ಇಂಡಿಯಾ ಕೋಚ್ ಭೇಟಿ, ಇಬ್ಬರು ಮಕ್ಕಳನ್ನು ಕೈಹಿಡಿದು ನಡೆದ ಗೌತಮ್ ಗಂಭೀರ್‌

ದೋಹಾ ಡೈಮಂಡ್‌ ಲೀಗ್‌ನಲ್ಲಿ ನೀರಜ್ ಚೋಪ್ರಾ ವಿರುದ್ಧ ಸ್ಪರ್ಧಿಸದ ಪಾಕ್‌ನ ಅರ್ಷದ್‌ ನದೀಮ್, ಕಾರಣ ಹೀಗಿದೆ

ಮುಂದಿನ ಸುದ್ದಿ
Show comments