ಮುಂಬೈ: ನಾಳೆಯಿಂದ ವೆಸ್ಟ್ ಇಂಡೀಸ್ ವಿರುದ್ಧ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಾಕ್ ಕ್ರಿಕೆಟಿಗ ಇಂಜಮಾಮ್ ಉಲ್ ಹಕ್ ದಾಖಲೆ ಮುರಿಯುವ ಅವಕಾಶ ಪಡೆದಿದ್ದಾರೆ.
ಟೀಂ ಇಂಡಿಯಾ ನಾಯಕ ಈ ಪಂದ್ಯದಲ್ಲಿ ಶತಕ ಗಳಿಸಿದರೆ ಇಂಜಮಾಮ್ ದಾಖಲೆಯನ್ನು ಮೀರಿ ನಡೆಯಲಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ ಇದುವರೆಗೆ 24 ಶತಕ ಗಳಿಸಿದ್ದಾರೆ.
25 ನೇ ಶತಕ ಗಳಿಸಿದರೆ ಅವರು ಪಾಕ್ ಕ್ರಿಕೆಟಿಗ ಇಂಜಮಾಮ್ ರ 25 ಶತಕಗಳ ಸಂಖ್ಯೆಯನ್ನು ದಾಟಿ ಮುನ್ನಡೆಯಲಿದ್ದಾರೆ. ಇಂಜಮಾಮ್ ಒಟ್ಟು 120 ಪಂದ್ಯಗಳಿಂದ 25 ಶತಕ ಗಳಿಸಿದ್ದರು. ಆದರೆ ಕೊಹ್ಲಿ ಇದುವರೆಗೆ ಕೇವಲ 72 ಟೆಸ್ಟ್ ಪಂದ್ಯ ಆಡಿದ್ದಾರಷ್ಟೇ. ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ಶತಕಗಳ ದಾಖಲೆ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಅವರು ಒಟ್ಟು 51 ಶತಕ ಸಿಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.