Select Your Language

Notifications

webdunia
webdunia
webdunia
webdunia

Virat Kohli: ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ಗೆ ವಿರಾಟ್ ಕೊಹ್ಲಿ ನಿವೃತ್ತಿ

Virat Kohli

Krishnaveni K

ಮುಂಬೈ , ಸೋಮವಾರ, 12 ಮೇ 2025 (12:06 IST)
ಮುಂಬೈ: ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್ ಮಾದರಿಗೆ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡಾ ನಿವೃತ್ತಿ ಘೋಷಿಸಿದ್ದಾರೆ. ಇದು ಫ್ಯಾನ್ಸ್ ಗೆ ನಿಜಕ್ಕೂ ಶಾಕ್ ಆಗಿದೆ.

ಮೊನ್ನೆಯಷ್ಟೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟೆಸ್ಟ್ ಮಾದರಿಗೆ ವಿದಾಯ ಘೋಷಿಸಿದ್ದರು. ಇವರ ಬೆನ್ನಲ್ಲೇ ಈಗ ಕೊಹ್ಲಿ ಕೂಡಾ ನಿವೃತ್ತಿ ಘೋಷಿಸಿರುವುದರಿಂದ ಟೀಂ ಇಂಡಿಯಾಕ್ಕೆ ಒಟ್ಟಿಗೇ ಡಬಲ್ ಶಾಕ್ ಆದಂತಾಗಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿ ಸುದೀರ್ಘ ಪೋಸ್ಟ್ ಬರೆದುಕೊಂಡಿದ್ದಾರೆ. 14 ವರ್ಷದಿಂದ ಈ ಬ್ಯಾಗೀ ಬ್ಲೂ ಕ್ಯಾಪ್ ಧರಿಸಿ ಟೆಸ್ಟ್ ಕ್ರಿಕೆಟ್ ಆಡಿರುವುದು ನನಗೆ ನಿಜಕ್ಕೂ ಗೌರವದ ಸಂಗತಿ. ಈ ಮಾದರಿಯ ಕ್ರಿಕೆಟ್ ನನ್ನನ್ನು ಅತ್ಯುತ್ತಮ ಕ್ರಿಕೆಟಿಗನಾಗಿ ರೂಪಿಸಿದೆ. ಈ ನೆನಪುಗಳನ್ನು ನನ್ನ ಜೀವನ ಪರ್ಯಂತ ಕಾಪಾಡಿಕೊಳ್ಳುತ್ತೇನೆ. ನಾನು ಈ ಮಾದರಿಯಿಂದ ನಿವೃತ್ತಿಯಾಗುತ್ತಿದ್ದೇನೆ. ಇದು ನನಗೆ ಅತ್ಯಂತ ಕಠಿಣ ಸಮಯ. ಭಾರವಾದ ಹೃದಯದಿಂದ ನಿವೃತ್ತಿಯಾಗುತ್ತಿದ್ದೇನೆ’ ಎಂದು ಕೊಹ್ಲಿ ಭಾವುಕ ಸಂದೇಶ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Video: ಅವ್ನೀತ್ ಕೌರ್ ಫೋಟೋ ಲೈಕ್ ಮಾಡಿದ್ದ ಕೊಹ್ಲಿ, ಪೂಸಿ ಹೊಡೆದರೂ ಅನುಷ್ಕಾ ಕರಗುತ್ತಿಲ್ವಂತೆ